Advertisement

ಏಕಾ ಏಕಿ ಫುಟ್ ಪಾತ್ ಮೇಲೆ ನುಗ್ಗಿದ ಕಾರು : ಹಲವರಿಗೆ ಗಾಯ

11:15 AM Aug 20, 2019 | Hari Prasad |

ಬೆಂಗಳೂರು: ಅದು ಬೆಂಗಳೂರಿನ ಜನನಿಬಿಡ ಪ್ರದೇಶ. ಅಲ್ಲಿದ್ದ ಪಾದಚಾರಿ ರಸ್ತೆಯ ಮೆಲೆ ಮಹಿಳೆಯೊಬ್ಬರು ವೇಗವಾಗಿ ನಡೆದುಕೊಂಡು ಹೋಗುತ್ತಿದ್ದಾರೆ. ಮತ್ತೆ ಕೆಲವರು ಅಲ್ಲೇ ಇದ್ದ ದರ್ಶಿನಿಯಲ್ಲಿ ತಿಂಡಿ ತಿನ್ನುತ್ತಾ ಚಹಾ ಕುಡಿಯುತ್ತಾ ಹರಟುತ್ತಿದ್ದಾರೆ. ಆಗ, ಇದ್ದಕ್ಕಿದ್ದಂತೆಯೇ ವೇಗವಾಗಿ ನುಗ್ಗಿಬಂದ ಕಾರೊಂದು ಆ ಪ್ರದೇಶದ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ.

Advertisement

ಈ ಭಯಾನಕ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ನಗರದ ಹೆಚ್.ಎಸ್.ಆರ್.ಲೇ.ಔಟ್.ನಲ್ಲಿ ಈ ಘಟನೆ ನಡೆದಿದ್ದು ಕಾರನ್ನು ಚಲಾಯಿಸುತ್ತಿದ್ದ ಚಾಲಕ ಪಾನಮತ್ತನಾಗಿದ್ದ ಎಂದು ತಿಳಿದುಬಂದಿದೆ. ಕಾರು ನುಗ್ಗಿದ ರಭಸಕ್ಕೆ ಅಲ್ಲಿದ್ದವರಲ್ಲಿ ಕೆಲವರು ಕಾರಿನ ಮುಂಭಾಗಕ್ಕೆ ಸಿಲುಕಿ ಒಂದಷ್ಟು ದೂರಕ್ಕೆ ಹೋಗಿ ಬೀಳುತ್ತಾರೆ ಮತ್ತು ಒಂದಿಬ್ಬರು ಕಾರಿನ ಅಡಿಭಾಗಕ್ಕೆ ಸಿಲುಕುವ ದೃಶ್ಯ ಭಯಾನಕವಾಗಿದೆ.

ಘಟನೆಗೆ ಕಾರಣನಾದ ಮಹಿಂದ್ರ ಕ್ಸೈಲೋ ವಾಹನದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕ ಪಾನಮತ್ತನಾಗಿದ್ದ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದಿತ್ಯವಾರ ಈ ಘಟನೆ ನಡೆದಿದ್ದು ಈ ಘಟನೆಗಳು ದಾಖಲಾಗಿರುವ ಸಿಸಿಟಿವಿ ದೃಶ್ಯಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next