Advertisement

Chitradurga: ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋನ್ ಮಾದರಿಯ ವಿಮಾನ ಪತನ

10:58 AM Aug 20, 2023 | Team Udayavani |

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಬಳಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋನ್ ಮಾದರಿಯ ವಿಮಾನ ಭಾನುವಾರ ಬೆಳಗ್ಗೆ ಜಮೀನೊಂದರಲ್ಲಿ ಪತನವಾಗಿದೆ.

Advertisement

ಚಳ್ಳಕೆರೆ ತಾಲ್ಲೂಕು ಕುದಾಪುರ ಬಳಿಯಿರುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಸಿದ್ಧಪಡಿಸಿದ್ಧ ಯುದ್ಧ ವಿಮಾನ ಕುದಾಪುರ ವಾಯು ನೆಲೆಯಿಂದ ಭಾನುವಾರ ಬೆಳಿಗ್ಗೆ ಹಾರಾಟ ಆರಂಭಿಸಿತ್ತು.

ಈ ವೇಳೆ ವದ್ದಿಕೆರೆ ಬಳಿ ನಿಯಂತ್ರಣ ತಪ್ಪಿ ಸಿದ್ದಪ್ಪ ಎಂಬುವವರ ಜಮೀನಿಲ್ಲಿ ಪತನವಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.

ಡ್ರೋಣ್ ಮಾದರಿಯ ವಿಮಾನ ಪತನವಾದ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು, ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹಾಗೂ ವಾಯುಪಡೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

Advertisement

ಇದನ್ನೂ ಓದಿ: Rajiv Gandhi Birth Anniversary: ತಂದೆಯ ಮಾತು ನೆನೆದು ಭಾವುಕರಾದ ರಾಹುಲ್

Advertisement

Udayavani is now on Telegram. Click here to join our channel and stay updated with the latest news.

Next