Advertisement

World Cup Final; ಕನಸು ನನಸಾಯಿತು….: ಟಾಸ್ ವೇಳೆ ನಾಯಕ ರೋಹಿತ್ ಶರ್ಮಾ

02:55 PM Nov 19, 2023 | Team Udayavani |

ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಕೂಟದ ಫೈನಲ್ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮೆಗಾ ಕಪ್ ಗಾಗಿ ಸ್ಪರ್ಧೆಯಲ್ಲಿದೆ.

Advertisement

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ವೇಳೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಆದರೆ ಇದೀಗ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಭಾವುಕರಾದ ರೋಹಿತ್ ಈ ಅವಕಾಶದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

2011 ರಿಂದ 2023 ರವರೆಗಿನ ಅವರ ಪ್ರಯಾಣದ ಬಗ್ಗೆ ಟಾಸ್ ವೇಳೆ ರವಿ ಶಾಸ್ತ್ರಿ ಕೇಳಿದಾಗ, ರೋಹಿತ್ ತಮ್ಮ ಕನಸು ನನಸಾಗಿದೆ ಎಂದು ಒಪ್ಪಿಕೊಂಡರು.

ಇದನ್ನೂ ಓದಿ:Bangladesh; ರಾಜಕೀಯಕ್ಕಿಳಿದ ಶಕೀಬ್ ಅಲ್ ಹಸನ್; ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ

“ಫೈನಲ್‌ನಲ್ಲಿ ತಂಡದ ನಾಯಕನಾಗುವುದು ಕನಸಿನ ಮಾತು. ನಮ್ಮ ಮುಂದೆ ಏನಿದೆ ಎಂದು ನನಗೆ ತಿಳಿದಿದೆ. ನಾವು ಚೆನ್ನಾಗಿ ಆಡಬೇಕು ಮತ್ತು ಫಲಿತಾಂಶವನ್ನು ಪಡೆಯಬೇಕು. ಮೈದಾನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದು ನಮಗೆ ಮುಖ್ಯ. ಕಳೆದ 10 ಪಂದ್ಯಗಳಲ್ಲಿ ಸತತವಾಗಿ ಮಾಡಿದ್ದೇವೆ” ಎಂದು ಅವರು ಹೇಳಿದರು.

Advertisement

ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದೆ. ಬ್ಯಾಟಿಂಗ್ ಆರಂಭಿಸಿದ ಭಾರತವು 11 ಓವರ್ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ.

ಮತ್ತೊಮ್ಮೆ ತಂಡಕ್ಕೆ ಉತ್ತಮ ಆರಂಭಿಸಿದ ನಾಯಕ ರೋಹಿತ್ ಶರ್ಮಾ 47 ರನ್ ಗಳಿಸಿದರು. 31 ಎಸೆತ ಎದುರಿಸಿದ ರೋಹಿತ್ ಮೂರು ಸಿಕ್ಸರ್ ಬಾರಿಸಿದರು. ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ತಲಾ ನಾಲ್ಕು ರನ್ ಗಳಿಸಿ ಔಟಾದರು.

Advertisement

Udayavani is now on Telegram. Click here to join our channel and stay updated with the latest news.

Next