Advertisement

ಪತ್ರಕರ್ತರ ವಿಚಾರದಲ್ಲೂ ಕಿರಿಕ್‌ ಮಾಡುವ ಡ್ರ್ಯಾಗನ್‌

11:40 PM Jun 12, 2023 | Team Udayavani |

ಬೀಜಿಂಗ್‌/ಹೊಸದಿಲ್ಲಿ: ಸದಾ ಗಡಿ ವಿಚಾರಕ್ಕೆ ಸಂಬಂಧಿ ಸಿದಂತೆ ತಂಟೆ-ತಕರಾರು ತೆಗೆಯುವ ಚೀನ, ಈಗ ಪತ್ರಕರ್ತರ ವಿಷಯದಲ್ಲೂ ನಕಾರಾತ್ಮಕ ಧೋರಣೆ ತಾಳಿದೆ. ಪ್ರಸ್ತುತ ಬೀಜಿಂಗ್‌ನಲ್ಲಿರುವ ಭಾರತದ ಕೊನೆಯ ಪತ್ರ ಕರ್ತನನ್ನು ಮಾಸಾಂತ್ಯದ ಒಳಗಾಗಿ ದೇಶ ತೊರೆಯುವಂತೆ ಚೀನ ಸರ್ಕಾರ ಸೂಚಿಸಿದೆ. ಈ ಮೂಲಕ ಭಾರತದ ಯಾವುದೇ ಒಬ್ಬ ಪತ್ರ ಕರ್ತ ಚೀನದಲ್ಲಿ ಉಳಿ ಯ  ದಂತೆ, ಅವರ ವೀಸಾ ನವೀಕರಣ ಕಾರ್ಯವನ್ನು ಬೀಜಿಂಗ್‌ ಸ್ಥಗಿತಗೊಳಿಸಿದೆ.

Advertisement

ಏಪ್ರಿಲ್‌ನಲ್ಲಿ ಇಬ್ಬರು ಭಾರತೀಯ ಪತ್ರಕರ್ತರ ವೀಸಾಗಳನ್ನು ತಡೆಹಿಡಿಯಲಾಗಿತ್ತು. ಕಳೆದ ವಾರ ಮತ್ತೂಬ್ಬ ಭಾರತೀಯ ಪತ್ರಕರ್ತನನ್ನು ಬೀಜಿಂಗ್‌ನಿಂದ ಕಳುಹಿಸಲಾಗಿತ್ತು. ಇದೀಗ ಪ್ರಸ್‌ ಟ್ರಸ್ಟ್‌ ಆಫ್ ಇಂಡಿಯಾ(ಪಿಟಿಐ)ದ ಭಾರತೀಯ ಪತ್ರಕರ್ತನನ್ನು ಈ ತಿಂಗಳೊಳಗೆ ಚೀನ ಬಿಟ್ಟು ಭಾರತಕ್ಕೆ ತೆರಳುವಂತೆ ಸೂಚಿಸಲಾಗಿದೆ. ಈ ಮೂಲಕ ಚೀನದಲ್ಲಿ ಇನ್ನು ಮುಂದೆ ಭಾರತದ ಪ್ರತಿನಿಧಿ ಇರುವುದಿಲ್ಲ.

ಕೇಂದ್ರ ಟೀಕೆ: ಇದೇ ವೇಳೆ, ಪತ್ರಕರ್ತರನ್ನು ಅನುಚಿತವಾಗಿ ನಡೆಸಿಕೊಂಡಿದೆ ಎಂಬ ಚೀನ ಸರ್ಕಾರದ ವಾದ ವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಬಗ್ಗೆ ಮಾತ ನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ “ಚೀನ ಪತ್ರಕರ್ತರು ಸೇರಿದಂತೆ ವಿದೇಶಿ ಪತ್ರ ಕರ್ತರು ಯಾವುದೇ ಕಟ್ಟುಪಾಡುಗಳಿಲ್ಲದೇ ಭಾರತದಲ್ಲಿ ಸ್ವತಂತ್ರ್ಯವಾಗಿ ತಮ್ಮ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಇಲ್ಲಿನ ಸ್ಥಳೀಯ ವರದಿಗಾರರನ್ನು ವಿದೇಶಿ ಮಾಧ್ಯಮ ಸಂಸ್ಥೆಗಳು ನೇಮಿಸಿಕೊಳ್ಳಬಹುದಾಗಿದೆ. ಆದರೆ ಚೀನ ಸ್ಥಿತಿ ಇದಕ್ಕೆ ವಿರುದ್ಧವಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next