Advertisement
ಕುಂಡಡ್ಕದಲ್ಲಿ ಗೌರಿ ಹೊಳೆಗೆ ನಿರ್ಮಿಸಿದ ಸೇತುವೆಯೊಂದು ತೀರಾ ಶಿಥಿಲಾವಸ್ಥೆಗೆ ತಲುಪಿ, ಕುಸಿಯುವ ಹಂತದಲ್ಲಿತ್ತು. ಇದರಿಂದಾಗಿ ಈ ಭಾಗದ ಜನರು ಸಂಪರ್ಕ ಕಡಿತದ ಭೀತಿಯಲ್ಲಿಯೇ ದಿನಕಳೆಯುತ್ತಿದ್ದರು.ಈ ಸೇತುವೆಯ ಪಿಲ್ಲರ್ ಶಿಥಿಲವಾಗಿ ದ್ದಲ್ಲದೆ ಅಗಲ ಕಿರಿದಾದ ಈ ಸೇತುವೆಯಲ್ಲಿ ಲಘು ವಾಹನಗಳು ಮಾತ್ರ ಹೋಗುವ ಹಾಗೆ ಇತ್ತು.
ಸಂಸದ ನಳಿನ್‌ಕುಮಾರ್‌ಕಟೀಲು ಅವರು ಚೆನ್ನಾವರ-ಕುಂಡಡ್ಕ ಸೇತುವೆ ನಿರ್ಮಾಣಕ್ಕೆ ಹಾಗೂ ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ ಬಿಜೆಪಿ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಿ.ಸಿ. ಪಾಟೀಲ್ ಅವರಿಗೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಸಚಿವ ಅಂಗಾರ ಅವರೂ ಅನುದಾನ ನೀಡುವಂತೆ ಮನವಿ ಮಾಡಿದ್ದರು.
ಇವರ ಕೋರಿಕೆಯಂತೆ ರಸ್ತೆ ಹಾಗೂ ಸೇತುವೆ ಅಭಿವೃದ್ಧಿಗಾಗಿ ಲೋಕೋಪ ಯೋಗಿ ಇಲಾಖೆಯ ಮೂಲಕ 4.5 ಕೋಟಿ ರೂ. ಅನುದಾನ ಬಿಡುಗಡೆಗೊಂಡಿತ್ತು.
Related Articles
Advertisement
ಯಾರಿಗೆ ಪ್ರಯೋಜನಈ ಸೇತುವೆ ನಿರ್ಮಾಣದಿಂದ ಚೆನ್ನಾವರ ಕಿ.ಪ್ರಾ. ಶಾಲೆ, ಮುಕ್ಕೂರು ಹಿ.ಪ್ರಾ. ಶಾಲೆ, ಸವಣೂರು, ಪೆರುವಾಜೆ, ಬೆಳಂದೂರು ಕಾಲೇಜುಗಳಿಗೆ ಹೋಗುವವರಿಗೆ ಅನು ಕೂಲವಾಗಿದೆ. ಅಲ್ಲದೆ ಪಾಲ್ತಾಡಿ ನಿಂದ ಸವಣೂರು, ಪೆರುವಾಜೆ ಹೋಗುವ ವರಿಗೂ ಅನುಕೂಲವಾಗಿದೆ. ತಾರಿಪಡು³-ಚೆನ್ನಾವರ ರಸ್ತೆ ಅಭಿವೃದ್ಧಿ ಹಾಗೂ ಚೆನ್ನಾವರ-ಕುಂಡಡ್ಕ ಸೇತುವೆ ನಿರ್ಮಾಣ ಕುರಿತಂತೆ ಹಲವು ವರ್ಷಗಳ ಬೇಡಿಕೆ ಈಡೇರುವ ಮೂಲಕ 15 ವರ್ಷಗಳ ಬೇಡಿಕೆ ಈಡೇರಿದೆ.
-ಪುಟ್ಟಣ್ಣ ನಾಯ್ಕ,ಅಧ್ಯಕ್ಷರು, ಅಭ್ಯುದಯ ಯುವಕ ಮಂಡಲ ಚೆನ್ನಾವರ