Advertisement
ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಗಿರಿರಾಜ್ ಸಿಂಗ್ ಅವರೂ ಟ್ವೀಟ್ ಮಾಡಿ, “ಮಗಳೆಂದರೆ ರೋಹಿಣಿಯಂತೆ ಇರಬೇಕು. ನೀವು ಎಲ್ಲರಿಗೂ ಮಾದರಿಯಾಗಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ಲಾಲು ಪುತ್ರಿ ರೋಹಿಣಿಗೆ “ಆಚಾರ್ಯ’ ಎಂಬ ಉಪನಾಮ ಬಂದಿದ್ದು ಹೇಗೆ ಗೊತ್ತಾ? 1979ರಲ್ಲಿ ಬಿಹಾರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಕಮಲಾ ಆಚಾರ್ಯ ಅವರೇ ಲಾಲು ಅವರ ಪತ್ನಿಯ 2ನೇ ಹೆರಿಗೆ ಮಾಡಿಸಿದ್ದರು. ಸಿಸೇರಿಯನ್ ಮೂಲಕ ರೋಹಿಣಿ ಜನಿಸಿದ್ದರು. ಆಗ, ವೈದ್ಯೆ ಕಮಲಾರಿಗೆ ಉಡುಗೊರೆ ನೀಡಲು ಲಾಲು ಅವರು ಮುಂದಾದಾಗ, ಅದನ್ನು ನಿರಾಕರಿಸಿದ್ದ ಕಮಲಾ, “ಗಿಫ್ಟ್ ಬದಲಾಗಿ ನಿಮ್ಮ ಮಗಳಿಗೆ ನನ್ನ ಉಪನಾಮವನ್ನು ಇಡುತ್ತೀರಾ’ ಎಂದು ಕೇಳಿದ್ದರು. ಅಂದಿನಿಂದ ರೋಹಿಣಿ ಅವರು “ರೋಹಿಣಿ ಆಚಾರ್ಯ’ ಆದರು.