Advertisement

ವಿಚ್ಚೇದನ ನಿಲುವು ಬದಲಿಸಿ ಮತ್ತೆ ಒಂದಾದ ದಂಪತಿಗಳು

08:29 AM Jul 09, 2023 | Team Udayavani |

ಕುಷ್ಟಗಿ: ರಾಷ್ಟ್ರೀಯ ಲೋಕ ಅದಾಲತ್ ಪ್ರಕರಣಗಳ ಇತ್ಯರ್ಥ ಪ್ರಕ್ರಿಯೆ ಸಂಧರ್ಭದಲ್ಲಿ ವಿಚ್ಚೇದನ ಕೋರಿ ಜೀವನಾಂಶಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗಳು, ಮನಸ್ತಾಪ ಮರೆತು ನ್ಯಾಯಾಧೀಶರು ಹಾಗೂ ವಕೀಲರ ಮನವೊಲಿಕೆಯಿಂದ ಮತ್ತೆ ಒಂದಾದ ಅಪರೂಪದ ಘಟನೆಗೆ ನ್ಯಾಯಾಲಯ ಸಭಾಂಗಣ ಸಾಕ್ಷಿಯಾಯಿತು.

Advertisement

ಕುಷ್ಟಗಿಯ ಪಿಗ್ಮಿ ಸಂಗ್ರಾಹಕ ಶ್ಯಾಮಣ್ಣ ಹನಮಂತಪ್ಪ ತಳವಾರ ಅವರೊಂದಿಗೆ ರತ್ನಮ್ಮ ಕಳೆದ 20-5-2015ರಲ್ಲಿ ಮದುವೆಯಾಗಿದ್ದರು. ಕೌಟುಂಬಿಕ ಜೀವನದಲ್ಲಿ ವೈಮನಸ್ಸಿನಿಂದಾಗಿ ಆಗಸ್ಟ್ 28ರ 2015ರಲ್ಲಿ ವಿಚ್ಚೇಧನಕ್ಕೆ  ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.

ಸುಧೀರ್ಘ ವಿಚಾರಣೆ ನಡೆದ 7 ವರ್ಷಗಳ ಬಳಿಕ ನ್ಯಾಯಾಧೀಶರರು ಹಾಗೂ ವಕೀಲ ಮನವೊಲಿಕೆಯಿಂದಾಗಿ ಈ ದಂಪತಿ ಮನಸ್ತಾಪ ಮರೆತು. ಒಂದಾಗಿ ಜೀವನ ಸಾಗಿಸುವುದಾಗಿ ಮುಂದೆ ಬಂದಿದ್ದರಿಂದ ಸದರಿ ಪ್ರಕರಣ ಇತ್ಯರ್ಥಗೊಳ್ಳುವ ಪೂರ್ವದಲ್ಲಿ ಒಂದಾಗಿದ್ದರಿಂದ ಅವರಿಗೆ ಹೆಣ್ಣು ಮಗುವಾಗಿತ್ತು. ರಾಷ್ಟ್ರೀಯ ಲೋಕ ಅದಾಲತ್ ಸಂದರ್ಭದಲ್ಲಿಈ ದಂಪತಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸರಸ್ವತಿ ದೇವಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಂಭುಲಿಂಗಯ್ಯ ಹಿರೇಮಠ ಹಾಗೂ ಹೆಚ್ಚುವರಿ ನ್ಯಾಯಾಲಾಯ ನ್ಯಾಯಾಧೀಶರಾದ ಸತೀಶ್ ವ್ಹೀ ಅವರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು, ಪರಸ್ಪರ ಸಿಹಿ ತಿನ್ನಿಸಿದರು. ರತ್ನಾ ಪರವಾಗಿ ಎಸ್.ವೈ. ಬುಕನಟ್ಟಿ ಹಾಗೂ ಶ್ಯಾಮಣ್ಣ ಪರವಾಗಿ ವೈ.ಜೆ. ಪೂಜಾರ ವಾದ ಮಂಡಿಸಿದ್ದರು.

ಇದೇ ವೇಳೆ ಇನ್ನೊಂದು ಪ್ರಕರಣದಲ್ಲಿ ತಾಲೂಕಿನ ನಂದಾಪೂರ ಗ್ರಾಮದ ಪರಶುರಾಮ್ ಸುಣಗಾರ, ರೇಖಾ ಅವರದು ಕಳೆದ 1998ರಲ್ಲಿ ಮದುವೆಯಾಗಿತ್ತು , ಮದುವೆಯಾಗಿ ಎರಡೇ ವರ್ಷದಲ್ಲಿ ಕೌಟುಂಬಿಕ ಮನಸ್ತಾಪಕ್ಕಾಗಿ ವಿಚ್ಚೇಧನ ಹಾಗೂ ಜೀವನಾಂಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸದರಿ ಲೋಕ ಅದಾಲತ್ ಪ್ರಕರಣಗಳಲ್ಲಿ ನ್ಯಾಯಾಧೀಶರು ಹಾಗೂ ವಕೀಲರ ಮನವೋಲೈಕೆಗೆ ಸದರಿ ದಂಪತಿ ಮನಸ್ತಾಪ ಮರೆತು ಒಂದಾಗಿ ಜೀವನ ನಡಡೆಸಲು ಮನಃಪೂರ್ವಕವಾಗಿ ಒಪ್ಪಿದ್ದರಿಂದ ನಿಲುವು ಬದಲಿಸಿ ನ್ಯಾಯಾಧೀಶರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು, ಪರಸ್ಪರ ಸಿಹಿ ತಿನ್ನಿಸಿದರು. ಪರಶುರಾಮ್ ಸುಣಗಾರ ಪರವಾಗಿ ವಿ.ಎಸ್. ವಿಠ್ಠಲಾಪೂರ ಹಾಗೂ ರೇಖಾ ಪರವಾಗಿ ಅಮರೇಗೌಡ ಪಾಟೀಲ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next