Advertisement

Tomato: ಟೊಮ್ಯಾಟೋದಿಂದಲೇ ಮಗಳ ತುಲಾಭಾರ ಸೇವೆ ನೆರವೇರಿಸಿದ ದಂಪತಿ!

04:34 PM Jul 20, 2023 | Team Udayavani |

ವಿಶಾಖಪಟ್ಟಣಂ: ದೇಶಾದ್ಯಂತ ಟೊಮ್ಯಾಟೋ ದರ ಗಗನಕ್ಕೇರಿದ್ದು, ಸಾಮಾನ್ಯ ಜನರಿಗೆ ಟೊಮ್ಯಾಟೋ ಕೈಗೆಟುಕದಂತಾಗಿದೆ. ಆದರೆ ಇಲ್ಲೊಂದು ದಂಪತಿ ತಮ್ಮ ಮಗಳ ತುಲಾಭಾರ ಸೇವೆಯನ್ನು ಟೊಮ್ಯಾಟೋ ಮೂಲಕ ನೆರವೇರಿಸಿದ್ದಾರೆ.

Advertisement

ಆಂಧ್ರ ಪ್ರದೇಶದ ಅನಾಕಪಲ್ಲಿ ಜಿಲ್ಲೆಯಲ್ಲಿರುವ  ನೂಕಾಂಬಿಕಾ ಅಮ್ಮಾವರಿ ದೇವಸ್ಥಾನದಲ್ಲಿ ಮಲ್ಲ ಜಗ್ಗಾ ಅಪ್ಪ ರಾವ್‌ ಮತ್ತು ಮೋಹಿನಿ ದಂಪತಿ ತಮ್ಮ ಪುತ್ರಿಯ ದೇಹ ತೂಕಕ್ಕೆ ಸರಿಯಾಗಿ ಅಂದರೆ ಸುಮಾರು 51 ಕೆ.ಜಿ ಯಷ್ಟು ಟೊಮ್ಯಾಟೋ ಉಪಯೋಗಿಸಿ ತುಲಾಭಾರ ಸೇವೆ ನೆರವೇರಿಸಿದ್ಧಾರೆ.

ದೇಶದ ಕೆಲವೆಡೆ ಒಂದು ಕೆ.ಜಿ ಟೊಮ್ಯಾಟೋ 150 ರಿಂದ 200 ರೂ. ತನಕವೂ ಮಾರಾಟವಾಗುತ್ತಿದೆ. ಹೀಗಿರುವಾಗ ಈ ದಂಪತಿ ನೆರವೇರಿಸಿರುವ ತುಲಾಭಾರ ಸೇವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಇದನ್ನೂ ಓದಿ: ಚಿಕ್ಕಮಗಳೂರು; ಮಲೆನಾಡಿನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ ಜಾರ್ಖಂಡ್ ರಾಜ್ಯಪಾಲರ ಕುಟುಂಬ

Advertisement

Udayavani is now on Telegram. Click here to join our channel and stay updated with the latest news.

Next