ಬೆಂಗಳೂರು: ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ (ಯುಜಿಸಿ) ಆರಂಭಿಸಲು ಹೊರಟಿರುವ ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ)ಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದು ಮಾತ್ರವಲ್ಲ, ಸ್ಥಳೀಯ ಶಿಕ್ಷಣ ಸಂಸ್ಥೆಗಳ ಸಂಪನ್ಮೂಲ ಬೇರೊಬ್ಬರಿಗೆ ನೀಡಿದಂತಾಗುತ್ತದೆಯೇ?
ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಲ್ಲಿರುವ ಹೊಸ ಚಿಂತನೆಗಳಿಗೆ ವೇದಿಕೆ ಕಲ್ಪಿಸುತ್ತಿವೆ. ಸ್ಟಾರ್ಟ್ ಅಪ್ ಆರಂಭಿಸಲು ಬೇಕಾಗುವ ಅವಶ್ಯ ಅನುದಾನ ಮತ್ತು ಇನ್ನಿತರ ಸಹಾಯ ಗಳನ್ನು ಮಾಡಿಕೊಡುತ್ತಿವೆ. ಈ ಎಲ್ಲಾ ಕಾರಣಗಳಿಂದ ವಿದ್ಯಾರ್ಥಿಗಳ ಮೊದಲ ಆಯ್ಕೆ ಬೆಂಗ ಳೂರು ಇರಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಹಲ ವಾರು ರೀತಿಯಲ್ಲಿ ಸಮಸ್ಯೆ ಯಾಗಲಿದೆ ಎಂದು ತಜ್ಞರು ಹೇಳುತ್ತಾರೆ.
ಭಾರತವು ಪ್ರತಿ ಕ್ಷೇತ್ರದಲ್ಲಿಯೂ ಪ್ರಾದೇಶಿಕವಾಗಿ ವೈವಿಧ್ಯತೆ ಹೊಂದಿದೆ. ಇದನ್ನು ಕೇಂದ್ರೀಕರಣ ಮಾಡುವುದು ಸರಿಯಲ್ಲ. “ಒಂದು ದೇಶ, ಒಂದು ಪರೀಕ್ಷೆ’ಯಿಂದ ಸ್ಥಳೀಯರಿಗೆ ಹಾಗೂ ಅವಕಾಶ ವಂಚಿತ ಸಮುದಾಯಗಳು ಮತ್ತಷ್ಟು ಅವಕಾಶ ವಂಚಿತರಾಗಲಿದ್ದಾರೆ ಎನ್ನುತ್ತಾರೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಎಸ್. ಜಾಫೆಟ್.
ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ: ಕೇಂದ್ರ ಸರಕಾರವು ರಾಜ್ಯಗಳಿಗೂ ಅಧಿಕಾರ ನೀಡಬೇಕು. ಕೇಂದ್ರದಿಂದಲೇ ಎಲ್ಲವನ್ನೂ ನಿರ್ವಹಿಸುವ ವ್ಯವಸ್ಥೆ ಮಾರಕವಾಗಲಿದೆ. ಉದಾಹರಣೆಗೆ: ನ್ಯಾಷನಲ್ ಲಾ ಸ್ಕೂಲ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಕಾನಚೂನು ಪ್ರವೇಶ ಪರೀಕ್ಷೆ (ಕ್ಲಾಟ್) ಪರೀಕ್ಷೆಯಲ್ಲಿ ಕಳೆದ 25 ವರ್ಷಗಳಲ್ಲಿ ಕನ್ನಡಿಗರ ಆಯ್ಕೆ ಬೆರಳೆಣಿಕೆಯಷ್ಟಿದೆ. ಹೀಗಾಗಿ ಕನ್ನಡಿಗರಿಗೆ ಶೇ.25ರಷ್ಟು ಮೀಸ ಲಾತಿ ನೀಡುವ ಕಾನೂನು ತರ ಲಾಯಿತು. ಇದ ರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿತು. ಇದು ಕೇವಲ ಒಂದು ಪರೀಕ್ಷೆಗೆ ಸೀಮಿತ ವಾಗಿ ಲ್ಲ. ಪ್ರಾಧ್ಯಾ ಪಕರ ನೇಮಕಾತಿಗೆ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್), ಬ್ಯಾಂಕಿಂಗ್, ರೈಲ್ವೆ ನೇಮಕಾತಿ ಪರೀಕ್ಷೆ ಸೇರಿದಂತೆ ಸಾರ್ವತ್ರಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂದು ಹೇಳುತ್ತಾರೆ.
ರಾಜ್ಯಮಟ್ಟದಲ್ಲಿ ಪರೀಕ್ಷೆ ನಡೆಯಲಿ: ರಾಷ್ಟ್ರ ಮಟ್ಟ ದ ಬದಲಾಗಿ ರಾಜ್ಯಮಟ್ಟದಲ್ಲಿ ಪರೀಕ್ಷೆ ನಡೆಸು ವುದರಿಂದ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸೌಲಭ್ಯ ಸಿಗುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಅನುಕೂಲವಾಗಲಿದೆ. ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆ ನಡೆಸುವುದರಿಂದ ನಮ್ಮ ಸಂಪನ್ಮೂಲವಾಗಿ ಬೇರೆಯವರಿಗೆ ಬಿಟ್ಟುಕೊಟ್ಟು, ರಾಜ್ಯಕ್ಕೆ ಅನ್ಯಾಯ ಮಾಡಿಕೊಂಡಂತೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯಬೇಕಿದೆ. ಅದ ರಲ್ಲಿಯೂ ಫಲಾನುಭವಿಗಳಾದ ವಿದ್ಯಾರ್ಥಿಗಳು, ಪೋಷಕರು, ಜನಸಾಮಾನ್ಯರು, ಪ್ರಾಧ್ಯಾಪಕರು, ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಮೊದಲು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಸಬೇಕಿದೆ. ದಿಢೀರ್ ಏಕಮುಖ ನಿರ್ಧಾರ ಕೈಗೊಳ್ಳುವುದು ಉತ್ತಮ ನಿರ್ಧಾರವಲ್ಲ ಎಂಬುದು ತಜ್ಞರ ಅಭಿಮತ.
ಯಾವುದೇ ವಿಶ್ವವಿದ್ಯಾನಿಲಯವು ತನ್ನ ಸುತ್ತಲಿನ ಪ್ರದೇಶದ ಅಗತ್ಯತೆಗಳಿಗೆ ಇರಬೇಕು. ಒಂದು ವೇಳೆ ಸಾರ್ವತ್ರಿಕರಣ ಗೊಳಿಸಿದರೆ, ಸ್ವಾಯತ್ತತೆ ಹಾಳಾಗುವ ಜತೆಗೆ ತನ್ನದೇ ಅಸ್ಮಿತೆ ಕಳೆದು ಕೊಳ್ಳಲಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ, ಸಾಮಾನ್ಯ ಪಠ್ಯಕ್ರಮ, ಸಾಮಾನ್ಯ ಬೋಧನಾ ಸಿಬಂದಿ. ಹೀಗೆ ಎಲ್ಲವೂ ಸಾಮಾನ್ಯ ಮಾಡುವುದಾದರೆ, ವಿವಿಗಳು ಏಕೆ ಬೇಕು. ವಿವಿ ಗಳನ್ನು ಉನ್ನತ ಶಿಕ್ಷಣದ ಒಂದು ಭಾಗ ಮಾಡಿಬಿಡಿ ಸಾಕು ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಬೆಂ.ವಿವಿ ವಿಶ್ರಾಂತ ಕುಲಪತಿ ಡಾ| ಎಂ.ಎಸ್. ತಿಮ್ಮಪ್ಪ.
ಸ್ಥಳೀಯರಿಗೆ ಕೈತಪ್ಪಲಿಗೆ ಸೀಟುಗಳು
ರಾಷ್ಟ್ರ ಮಟ್ಟದಲ್ಲಿ ಪ್ರವೇಶ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಪ್ಲೇಸ್‌ಮೆಂಟ್ ಇರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಉತ್ತಮ ಪ್ಲೇಸ್‌ಮೆಂಟ್ ಇರುವ ಕಾಲೇಜುಗಳು ಹೆಚ್ಚಿನ ಅಂಕ ಪಡೆಯುವವರ ಪಾಲಾಗಲಿವೆ. ವಿಶ್ವವಿದ್ಯಾನಿಲಯದ ಮಟ್ಟದ ಪರೀಕ್ಷೆಗಳನ್ನು ನಡೆಸಿದರೆ, ಸ್ಥಳೀಯ ವಿದ್ಯಾರ್ಥಿಗಳು ಮಾತ್ರ ಸ್ಪರ್ಧಿಸುತ್ತಾರೆ. ಸಿಯುಇಟಿ ಆರಂಭವಾದರೆ, ದೇಶಾದ್ಯಂತ ವಿದ್ಯಾರ್ಥಿಗಳು ಒಂದೇ ವೇದಿಕೆಗೆ ಬರಲಿದ್ದಾರೆ. ಇದರಿಂದ ಉನ್ನತ ಶಿಕ್ಷಣದಲ್ಲಿ ಸಂಸ್ಥೆಗಳಲ್ಲಿ ಮೂಲಸೌಕರ್ಯ ಮತ್ತು ಗುಣಮಟ್ಟದ ವ್ಯಾಸಂಗ ಇರದ ರಾಜ್ಯದ ವಿದ್ಯಾರ್ಥಿಗಳು ಬೆಂಗಳೂರಿನತ್ತ ವಲಸೆ ಬರುತ್ತಾರೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಲಿದ್ದಾರೆ ಎಂದು ತಜ್ಞರು ಹೇಳುತ್ತಾರೆ.
-ಎನ್.ಎಲ್.ಶಿವಮಾದು