Advertisement

ಸ್ಥಳೀಯರ ಎಚ್ಚರಿಕೆ ಕರೆಗೆ ಎಚ್ಚೆತ್ತ  ಗುತ್ತಿಗೆದಾರ

06:40 AM May 15, 2018 | |

ಕಾಪು: ಪೇಟೆಯ ವಿಜಯ ಬ್ಯಾಂಕ್‌ ಮುಂಭಾಗದ ಪಿಡಬ್ಲೂಡಿ ರಸ್ತೆ ಪಕ್ಕದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಪ್ರದೇಶದಲ್ಲಿ ಮಳೆಯ ಕಾರಣದಿಂದಾಗಿ ಮ್ಯಾನ್‌ಹೋಲ್‌ ಪಕ್ಕದ ರಸ್ತೆ ಕುಸಿದು ಅಪಾಯದ ಭೀತಿ ಎದುರಾಗಿದೆ.

Advertisement

ಪುರಸಭಾ ವ್ಯಾಪ್ತಿಯ ಪೇಟೆ ಪ್ರದೇಶದಲ್ಲೇ ಮ್ಯಾನ್‌ಹೋಲ್‌ ಕುಸಿದ ಪ್ರದೇಶವು ರಸ್ತೆಗೆ ತಾಗಿಕೊಂಡಂತಿದ್ದು, ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವವರು ಹೆದರುವಂತಾಗಿದೆ. ಮ್ಯಾನ್‌ಹೋಲ್‌ ಕುಸಿದಿರುವುದನ್ನು ಗಮನಿಸಿದೇ ಬಂದ ಒಂದೆರಡು ವಾಹನಗಳು ಮ್ಯಾನ್‌ಹೋಲ್‌ನಲ್ಲಿ ಸಿಲುಕಿಕೊಂಡ ಘಟನೆಗಳೂ ಸಂಭವಿಸಿವೆ.

ಮ್ಯಾನ್‌ಹೋಲ್‌ ಕುಸಿತದ ಪ್ರದೇಶವು ಅಪಘಾತಕ್ಕೆ ಆಹ್ವಾನ ನೀಡುವಂತಿದ್ದು, ಎಚ್ಚೆತ್ತುಕೊಂಡಿರುವ ಸ್ಥಳೀಯರು ಗಂಭೀರ ಪ್ರಮಾಣದ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಮರದ ಹಲಗೆ ಮತ್ತು ಕಲ್ಲುಗಳನಿಟ್ಟು ಎಚ್ಚರಿಕೆ ಗಂಟೆ ಬಾರಿಸುತ್ತಿದ್ದಾರೆ.ಇದರಿಂದ ಎಚ್ಚೆತ್ತ ಗುತ್ತಿಗೆದಾರರು ಕುಸಿತಕ್ಕೊಳಗಾಗಿರುವ ಮ್ಯಾನ್‌ ಹೋಲ್‌ನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ. ಆದರೂ ಕೂಡಾ ಮತ್ತೆ ಮಳೆ ಸುರಿದರೆ ಅಪಾಯ ಗ್ಯಾರಂಟಿ ಎಂಬಂತಿದ್ದು, ದೊಡ್ಡ ಮಟ್ಟದ ಅವಘಡ ಸಂಭವಿಸುವ ಮೊದಲೇ ಕುಸಿದುಹೋದ ಮ್ಯಾನ್‌ಹೋಲ್‌ನ್ನು ಸಮರ್ಪಕಗೊಳಿಸುವುದು ಒಳಿತು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next