Advertisement

ಕೋವಿಡ್ ಚಿಕಿತ್ಸೆಗೆ ಔಷಧಗಳ ಕಾಕ್‌ಟೈಲ್‌?

01:24 AM Dec 11, 2020 | mahesh |

ಹೊಸದಿಲ್ಲಿ/ಬೀಜಿಂಗ್‌: ಕೋವಿಡ್ ವೈರಸ್‌ನ ಪ್ರಮುಖ ಪ್ರೊಟೀನ್‌ಗಳ ವಿರುದ್ಧ ದಾಳಿ ಮಾಡುವಂಥ ಔಷಧಗಳು ಮತ್ತು ಸಂಭಾವ್ಯ ಕಾಕ್‌ಟೈಲ್‌ಗ‌ಳನ್ನು ಸಂಶೋಧಿಸುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನಿಗಳು ಹೆಜ್ಜೆಯಿಟ್ಟಿದ್ದಾರೆ.

Advertisement

ಕೆಲವೊಂದು ಔಷಧಗಳು ಹಾಗೂ ಕಾಕ್‌ಟೈಲ್‌ಗ‌ಳ ಮೂಲಕ ಕೊರೊನಾಗೆ ಚಿಕಿತ್ಸೆ ನೀಡುವ ಕುರಿತು ತಮಿಳುನಾಡಿನ ಅಳಗಪ್ಪ ವಿವಿ ಮತ್ತು ಸ್ವೀಡನ್‌ನ ಕೆಟಿಎಚ್‌ ರಾಯಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾ ಲಜಿಯ ಸಂಶೋಧಕರು ಪ್ರಸ್ತಾವಿ ಸಿದ್ದು, ಅಂತಹ ಔಷಧಗಳ ಪಟ್ಟಿಯನ್ನೂ ನೀಡಿದ್ದಾರೆ.

ಕೊರೊನಾ ವೈರಸ್‌ ಅತ್ಯಂತ ವೇಗವಾಗಿ ರೂಪಾಂತರಗೊಳ್ಳುತ್ತಿದೆ. ಅಂದರೆ ವೈರಸ್‌ ತನ್ನ ಪ್ರೊಟೀನ್‌ಗಳಲ್ಲಿ ಬದಲಾವಣೆ ಮಾಡುತ್ತಲೇ ಇರುತ್ತವೆ. ಹೀಗಾಗಿ, ಹಲವು ರೀತಿಯ ಪ್ರೊಟೀನ್‌ಗಳ ವಿರುದ್ಧ ದಾಳಿ ನಡೆಸುವಂಥ ಔಷಧದ ಅಗತ್ಯವಿದೆ. ವೈರಸ್‌ ರೂಪಾಂತರಗೊಂಡರೂ ಆ ಔಷಧವು ಪರಿಣಾಮಕಾರಿ ಆಗುವಂತಿರಬೇಕು. ಇದೇ ಕಾರಣಕ್ಕಾಗಿ ನಮ್ಮ ತಂಡವು ಹಲವು ಔಷಧಗಳ ಸಮ್ಮಿಶ್ರಣ (ಕಾಕ್‌ಟೈಲ್‌)ವನ್ನು ಬಳಸಲು ನಿರ್ಧರಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಬಲಾಕ್ಸವಿರ್‌ ಮಾರ್ಬಾಕ್ಸಿಲ್‌, ನೆಟಮೈಸಿನ್‌ ಮತ್ತು ಆರ್‌ಯು85053 ಮಿಶ್ರಣ(ಕಾಕ್‌ಟೈಲ್‌) ಅನ್ನೂ ಇವರು ಪ್ರಸ್ತಾವಿಸಿದ್ದು, ಈ ಔಷಧಗಳು ಕ್ರಮವಾಗಿ ಮೂರು ವೈರಲ್‌ ಪ್ರೊಟೀನ್‌ಗಳನ್ನು ಟಾರ್ಗೆಟ್‌ ಮಾಡುವ ಸಾಮರ್ಥ್ಯ ಹೊಂದಿವೆ.

ವಿಮಾನ ಸಿಬಂದಿಗೆ ಡೈಪರ್‌ ಕಡ್ಡಾಯಗೊಳಿಸಿದ ಚೀನ!
ಡೈಪರ್‌ ಧರಿಸಿ, ಟಾಯ್ಲೆಟ್‌ಗೆ ಹೋಗುವುದನ್ನು ನಿಲ್ಲಿಸಿ!’- ಇದು ನಾಗರಿಕ ವಿಮಾನಯಾನ ಸಿಬಂದಿಗೆ ಚೀನ ಸರಕಾರ ವಿಧಿಸಿದ ಕಟ್ಟಾಜ್ಞೆ. ನಿತ್ಯ ನೂರಾರು ಮಂದಿ ಪಯಣಿಸುವ ವಿಮಾನಗಳ ಟಾಯ್ಲೆಟ್‌, ಕೊರೊನಾದ “ಸೂಪರ್‌ ಸ್ಪ್ರೆಡ್ಡಿಂಗ್‌ ತಾಣ’ ಎಂದು ಚೀನದ ನಾಗರಿಕ ವಿಮಾನಯಾನ ಸಚಿವಾಲಯ ಮನಗಂಡಿದ್ದು, ಶೌಚಗೃಹಗಳಿಂದ ಆದಷ್ಟು ದೂರವಿರಲು ಸಿಬ್ಬಂದಿಗೆ ಸೂಚಿಸಿದೆ. ಪೈಲಟ್‌, ಗಗನಸಖೀ/ಸಖ, ತಾಂತ್ರಿಕ ಸಿಬಂದಿಗೆ ಡೈಪರ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇಲಾಖೆ ಸಿದ್ಧಪಡಿಸಿದ 38 ಪುಟಗಳ ನೂತನ ಮಾರ್ಗಸೂಚಿಯಲ್ಲಿ “ಡೈಪರ್‌’ ಸೇರ್ಪಡೆಗೊಂಡಿದೆ. ಅತೀಹೆಚ್ಚು ಸೋಂಕು ದೃಢಪಟ್ಟ ಪ್ರದೇಶಗಳಿಗೆ ಸಂಚಾರ ಕೈಗೊಳ್ಳುವಾಗ ಈ ನಿಯಮ ಕಡ್ಡಾಯವಾಗಿ ಅನುಸರಿಸಲು ಸೂಚಿಸಲಾಗಿದೆ. ಕ್ಯಾಬಿನ್‌ ಸಿಬಂದಿ ಕಡ್ಡಾಯವಾಗಿ ಪಿಪಿಇ ಕಿಟ್‌, ಮಾಸ್ಕ್, ದ್ವಿಪದರದ ರಬ್ಬರ್‌ ಗ್ಲೌಸ್‌, ಕನ್ನಡಕ, ಕ್ಯಾಪ್‌, ಬಳಸಿ ಎಸೆಯಲ್ಪಡುವಂಥ ಬಟ್ಟೆ ಮತ್ತು ಶೂ ಕವರ್‌ಗಳನ್ನು ಧರಿಸಿರಬೇಕು ಎಂಬ ನಿಯಮಗಳು ಮುಂದುವರಿದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next