Advertisement
ಹೀಗೆ ಅಪ್ಪಟ ಕನ್ನಡ ಶೀರ್ಷಿಕೆಗಳ ಲೆಕ್ಕಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಇಲ್ಲಿ ನೀವು ಗಮನಿಸಬೇಕಾದ ಸೂಕ್ಷ್ಮವಾದ ಅಂಶವೆಂದರೆ ಯಾವುದೋ ನಮ್ಮ ಆಡುಮಾತನ್ನು ಚಿತ್ರ ಶೀರ್ಷಿಕೆಯನ್ನಾಗಿಸುತ್ತಿರುವುದು.
– ಹೀಗೆ ಅದೆಷ್ಟೋ ಪತ್ರಿಕಾಗೋಷ್ಠಿಗಳಲ್ಲಿ ಅತಿಥಿಗಳು, ಅದರಲ್ಲೂ ವಾಣಿಜ್ಯ ಮಂಡಳಿಯ ಅಧ್ಯಕ್ಷರುಗಳು ಹೇಳುತ್ತಲೇ ಬರುತ್ತಿದ್ದಾ ರೆ. ಮಂಡಳಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಟೈಟಲ್ ವಿಚಾರವನ್ನು ಒತ್ತಿ ಹೇಳಲು ಒಂದು ಕಾರಣವಿತ್ತು. ಅದು ಯಾವುದೋ ಒಂದು ಇಂಗ್ಲೀಷ್ ಶೀರ್ಷಿಕೆಯನ್ನು ತಂದು ಅನುಮೋದನೆ ನೀಡುವಂತೆ ಮಂಡಳಿಯಲ್ಲಿ ರಚ್ಚೆ ಹಿಡಿಯುುುತ್ತಿದ್ದ ಸಿನಿಮಾ
ಮಂದಿ. “ಬೇಡ, ಬೇರೆ ಟೈಟಲ್ ಇಡಿ’ ಎಂದು ಮಂಡಳಿ ಹೇಳಿದರೂ, “ಇಲ್ಲಾ ಸಾರ್, ನಮ್ ಕಥೆಗೆ ಸಖತ್ ಸೂಟ್ ಆಗುತ್ತೆ’ ಎಂದು ಹೇಗೋ ಒಪ್ಪಿ ಸಿ, ಇಂಗ್ಲೀಷ್ ಶೀರ್ಷಿಕೆ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ, ಈಗ ಚಿತ್ರರಂಗಕ್ಕೆ ಭಿನ್ನವಾಗಿ ಯೋಚಿಸುವ, ಹೊಸದೇನಾದರೂ ಮಾಡಬೇಕೆಂಬ ಕನಸಿನೊಂದಿಗೆ ಬರುವ ಅನೇಕರು ಚಿತ್ರ¨ ಶೀರ್ಷಿಕೆ ವಿಚಾರದಲ್ಲೂ ಭಿನ್ನತೆ ಮೆರೆಯುತ್ತಿದ್ದಾರೆ. ಮುಖ್ಯವಾಗಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಬಂದ, ಬರುತ್ತಿರುವ ಸಿನಿಮಾಗಳನ್ನು ನೀವು ಸೂಕ್ಷ್ಮ ವಾಗಿ ಗಮನಿಸಿದರೆ ನಿಮಗೆ ಅಲ್ಲಿ ಅಚ್ಚ ಕನ್ನಡ ದ ಶೀರ್ಷಿಕೆಗಳು ಸಿಗುತ್ತವೆ. ಸುಂದರವಾದ, ಕೇಳಲು ಇಂಪಾ¨ ಕನ್ನಡದ ಶೀರ್ಷಿಕೆಗಳ ಮೂಲಕ ಅನೇಕ ಸಿನಿಮಾಗಳು ಗಮನ ಸೆಳೆಯುತ್ತಿವೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಲ್ಲೂ ಕನ್ನಡದ ಕಂಪು ಕಾಣುತ್ತಿದೆ. ನೀವೇ ಸೂಕ್ಷ್ಮ ವಾಗಿ ಗಮನಿಸಿದರೆ ಅಪ್ಪಟ ಕನ್ನಡ ಶೀರ್ಷಿಕೆಗಳೊಂದಿಗೆ ಅನೇಕ ಸಿನಿಮಾಗಳು ಗಮನಸೆಳೆಯುತ್ತಿವೆ. “ಕನ್ನಡಕ್ಕಾಗಿ ಒಂದನ್ನು ಒತ್ತಿ’, “ನಿಧಾನವಾಗಿ ಚಲಿಸಿ’, “ಕನ್ನಡ ದೇಶದೊಳ್’, “ಅಡಚಣೆಗಾಗಿ ಕ್ಷಮಿಸಿ’, “ನೀವು ಕರೆ ಮಾಡಿ¨ ಚಂದಾದಾರರು’, “ಸಾರ್ವಜನಿಕರಲ್ಲಿ ವಿನಂತಿ’, “ಪ್ರಯಾಣಿಕರ ಗಮನಕ್ಕೆ’, “ಮೋಡ ಕವಿದ ವಾತಾವರಣ’, “ನಡುವೆ ಅಂತರವಿರಲಿ’, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’, “ಹೀಗೊಂದು ದಿನ’, “ಇದು ಬೆಂಗಳೂರು ನಗರ ಯಾರೂ ಮಾಡಬೇಡಿ ನರಕ’, “ಕಥೆಯೊಂದು ಶುರುವಾಗಿದೆ’,
“ಯಾರಿಗೆ ಯಾರುಂಟು’, “ಕನ್ನಡ್ ಗೊತ್ತಿಲ್ಲ’, “ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’, “ರಾಮನು ಕಾಡಿಗೆ ಹೋದನು’, “ದಯವಿಟ್ಟು ಗಮನಿಸಿ’ – ಹೀಗೆ ಅಪ ³ಟ ಕನ್ನಡ ಶೀರ್ಷಿಕೆಗಳ ಲೆಕ್ಕಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.
Related Articles
Advertisement
ಹಾಗಂತ ಚಿತ್ರದ ಶೀರ್ಷಿಕೆ ಆಕರ್ಷಕವಾಗಿದ್ದ ಕೂಡಲೇ ಸಿನಿಮಾ ಗೆಲ್ಲುತ್ತಾ ಎಂದು ನೀವು ಕೇಳಬಹುದು. ಇಲ್ಲಿ ಗೆಲುವು- ಸೋಲಿನ ಲೆಕ್ಕಾಚಾರ ಆಮೇಲಿನ ಮಾತು. ನಿಮ್ಮ ಪೋಸ್ಟರ್ ಅನ್ನು ತಿರುಗಿ ನೋಡುವಂತೆ, ಈ ಸಿನಿಮಾದಲ್ಲಿ ಹೊಸತನ ಇರಬಹುದು ಎಂದು ಊಹಿಸಿಕೊಳ್ಳುವಲ್ಲಿ ಸಿನಿಮಾಗಳ ಶೀರ್ಷಿಕೆ ಮಹತ್ವ ಪಡೆದುಕೊಳ್ಳುತ್ತಿರುವುದಂತೂ ಸತ್ಯ. ಅದೇ ಕಾರಣದಿಂದ ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳು ಹೊಸ ಬಗೆಯ, ವಿಭಿನ್ನ ಎನಿಸುವ ಶೀರ್ಷಿಕೆಗಳನ್ನು ತಮ್ಮ ಚಿತ್ರಕ್ಕೆ ಇಡುತ್ತಿದ್ದಾರೆ. ಈ ಮೂಲಕ ಹೊಸತನದ ಜೊತೆಗೆ ಕನ್ನಡತನವನ್ನು ಸಾರುತ್ತಿದ್ದಾರೆ ಎನ್ನಬಹುದು. ರಿಷಭ್ ಶೆಟ್ಟಿ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ’ ಚಿತ್ರದ ಬಗೆಗಿನ ಮೊದಲ ಕುತೂಹಲಕ್ಕೆ ಆ ಶೀರ್ಷಿಕೆ ಕಾರಣ ಎಂದರೆ ತಪ್ಪಲ್ಲ. ಆ ನಂತರ ಚಿತ್ರ ತನ್ನ ಕಥಾವಸ್ತು, ಹಾಡುಗಳಿಂದ ಆ ಚಿತ್ರ ಕುತೂಹಲ ಹೆಚ್ಚಿಸುತ್ತಾ ಹೋಗಿ ಗೆದ್ದಿದ್ದು ಬೇರೆ ಮಾತು. ಇನ್ನು “ನಡುವೆ ಅಂತರವಿರಲಿ’, “ದಯವಿಟ್ಟು ಗಮನಿಸಿ’, “ಪ್ರಯಾಣಿಕರ ಗಮನಕ್ಕೆ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಈ ಚಿತ್ರಗಳೆಲ್ಲವೂ ಶೀರ್ಷಿಕೆ ಮೂಲಕ ಗಮನ ಸೆಳೆದಿದ್ದವು. ಈ ತರಹದ ವಿಭಿನ್ನ ಶೀರ್ಷಿಕೆಗಳ ಇನ್ನೊಂದಿಷ್ಟು ಚಿತ್ರಗಳ ಮೇಲೆ ಪ್ರೇಕ್ಷಕ ನಿರೀಕ್ಷೆ ಇಟ್ಟಿದ್ದಾನೆ.
ಚಿತ್ರರಂಗ ನಡೆಯೋದೇ ಟ್ರೆಂಡ್ ಮೇಲೆ. ಅದು ಕಥೆಯಿಂದ ಹಿಡಿದು ಮೇಕಿಂಗ್‌ವರೆಗೆ. ಅದೇ ತರಹ ಈಗ ಅಪ್ಪಟ ಕನ್ನಡ ಶೀರ್ಷಿಕೆಗಳ ಟ್ರೆಂಡ್ ನಡೆಯುತ್ತಿದೆ ಎನ್ನಬಹುದು. ಕನ್ನಡ ಚಿತ್ರರಂಗದಲ್ಲಿ ಈ ಟ್ರೆಂಡ್ ಬದಲಾಗದೇ ನಿರಂತರವಾದರೆ, ಅದರ ಸೊಗಸೇ ಬೇರೆ. ಈ ನಿಟ್ಟಿನಲ್ಲಿ ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳು ಹೆಚ್ಚು ಆಸಕ್ತಿ ವಹಿಸಬೇಕಾಗಿದೆ.
ರವಿ ಪ್ರ ಕಾಶ್ ರೈ