ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಹಯೋಗದೊಂದಿಗೆ ಬೆಂಗಳೂರು ಆಫ್ ಅಪೆಂಟೈಶಿಪ್ ಟ್ರೈನಿಂಗ್ (ಎಸ್‌ಆರ್), ಚೆನ್ನೈ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಎಂಜಿನಿಯರಿಂಗ್ ಪದವೀಧರರು, ಡಿಪ್ಲೊಮಾ, ಸಾಮಾನ್ಯ ಪದವೀಧರರಿಗೆ ವಾಕ್-ಇನ್-ಇಂಟರ್‌ವ್ಯೂ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳು ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಮೊದಲು
ಕಾರ್ಪೊರೇಟ್ ಕಂಪೆನಿ ಪರಿಕಲ್ಪನೆ ಗಳನ್ನು ಕಲಿಯುವುದು ಮುಖ್ಯ. ಆಸಕ್ತಿ, ಬದ್ಧತೆ, ತೊಡಗಿಸಿಕೊಳ್ಳುವಿಕೆ ಮತ್ತು ಶಿಸ್ತಿನಿಂದ ಯಶಸ್ಸು ಖಚಿತ ಎಂದು ಹೇಳಿದರು.
ಬೋಟ್ ಸಹಾಯಕ ನಿರ್ದೇಶಕ ಎಂ. ಸುರೇಶ್ ಕುಮಾರ್ ಮಾತ ನಾಡಿ, ಕಲಿಕೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು. ಡಿಟಿಇ ಉಪನಿರ್ದೇಶಕ ಬಿ. ಜಯರಾಜ್, ಡಿಟಿಇಯ ಶ್ರೀಧರ್ ನಾರಾಯಣಿ ಎಚ್. ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ| ಉಮೇಶ್ ಎಂ ಭುಶಿ ಸ್ವಾಗತಿಸಿದರು.
ಸಂದರ್ಶನದಲ್ಲಿ ಕೇರ್ನ್ಸ್ ಟೆಕ್ನಾಲಜಿ, ಮೈಸೂರು, ಕೆನರಾ ಸ್ಪ್ರಿಂಗ್ಸ್ ಮಂಗಳೂರು, ವಿನ್ಮನ್ ಸಾಫ್ಟ್‌ವೇರ್ ಲಿಮಿಟೆಡ್ ಮಂಗಳೂರು, ಅರವಿಂದ ಮೋಟಾರ್ಸ್ ಮಂಗಳೂರು, ಫೇಸ್ ದಿಯಾ ಸಿಸ್ಟಮ್ಸ್ ಮಂಗಳೂರು, ನವ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‌ಎಂಪಿಟಿ), ಯುನೈಟೆಡ್ ಬ್ರೂವರೀಸ್ ಬೆಂಗಳೂರು, ಕೆಐಒಸಿಎಲ್ ಮಂಗಳೂರು, ಮೆಸ್ಕಾಮ್, ಬಿಎಸ್‌ಎನ್‌ಎಲ್ ಮಂಗಳೂರು, ಟೊಯೋಟಾ ಬೋಸೊØàಕು ಆಟೋಮೋಟಿವ್ ಪ್ರೈ . ಲಿಮಿಟೆಡ್ ಬೆಂಗಳೂರು, ಕಿರ್ಲೋಸ್ಕರ್ ಟೊಯೋಟಾ ಮೆಷಿ ನರಿ ಲಿಮಿಟೆಡ್ ಬೆಂಗಳೂರು, ಟಿಎ ಎಫ್‌ಇ ದೊಡ್ಡಬಳ್ಳಾಪುರ ಬೆಂಗಳೂರು, ಟಿವಿ ಸುಂದ್ರಾಮ್ ಅಯ್ಯಂಗಾರ್ ಸನ್ಸ್ ಲಿಮಿಟೆಡ್ ಇಂಡೋ ಅಮೆರಿಕ ಎಂಐಎಂ ವೂರ್ತ್ ಎಲೆಕ್ಟ್ರಾನಿಕ್ಸ್ ಪ್ರೈ. ಲಿಮಿಟೆಡ್ ಮೈಸೂರು, ಐಟಿಐ ಲಿಮಿಟೆಡ್ ಬೆಂಗಳೂರು ವೆಹಿಕಲ್ ಟೆಕ್ನಾಲಜೀಸ್ ವಿಆರ್‌ವಿ ರಾಯಭಾರ ಟಿಎಎಫ್‌ಇ (ಪ್ಲಾಸ್ಟಿಕ್ ಟೂಲ್ ಕೊಠಡಿ ವಿಭಾಗ) ಬೆಂಗಳೂರು, ಜೆಬಿಎಂ ಅಪ÷ ಟೆಕ್ನಾಲಜೀಸ್ ಮಂಗಳೂರು, ಆರ್‌ಡಿಎಲ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಮಂಗಳೂರು ಡ್ರೀಮರ್‌ಗಳು ಭಾಗವಹಿಸಿದ್ದವು.