Advertisement

ಒಂದು ಬಿಸಿನೆಸ್‌ ಐಡಿಯಾ

04:06 AM May 18, 2020 | Lakshmi GovindaRaj |

ಜ್ಯೂಸ್‌ ಅಂಗಡಿ: ಇಂದು ಫಿಟ್ನೆಸ್‌, ಆರೋಗ್ಯಕರ ಆಹಾರ ಸೇವನೆ ಕುರಿತಾದ ಮಾರ್ಕೆಟಿಂಗ್‌, ಭರ್ಜರಿಯಾಗಿ ನಡೆಯುತ್ತಿದೆ. ಹೀಗಾಗಿ, ಜ್ಯೂಸ್‌ ಅಂಗಡಿಯನ್ನು ತೆರೆಯುವುದರಿಂದ, ಅದನ್ನು ಲಾಭಕರ ಉದ್ದಿಮೆಯನ್ನಾಗಿ ಮಾರ್ಪಡಿಸಬಹುದು. ಹಣ್ಣಿನಿಂದ ಫ್ರೆಷ್‌ ಜ್ಯೂಸನ್ನು ತಯಾರಿಸುವಾಗ, ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತದೆ.

Advertisement

ಆ ಬದಲಾವಣೆಗಳು ಯಾವುವೆಂದರೆ, ಹೊಸ ಸ್ವಾದಗಳ ಪ್ರಯೋಗ.  ಮನೆಯಲ್ಲೇ ಒಮ್ಮೆ ಪ್ರಯೋಗ ಮಾಡಿ, ಅಂಗಡಿಗೆ ಬಂದ ನಂತರ ಸ್ವಾದಗಳನ್ನು ಮಿಕ್ಸ್ ಮಾಡುವುದರಿಂದ, ಹೊಸ ಬಗೆಯ ರುಚಿ ದೊರೆಯುತ್ತದೆ. ಅಲ್ಲದೇ ಸಕ್ಕರೆ ಕಮ್ಮಿ ಅಥವಾ ಶುಗರ್‌ ಫ್ರೀ ಸಿಹಿ, ಮುಂತಾದ ಬದಲಾವಣೆಗಳಿಂದಲೂ,  ಹಣ್ಣಿನ ರಸವನ್ನು ಇನ್ನಷ್ಟು ಆರೋಗ್ಯಕರ ಪೇಯವನ್ನಾಗಿ ಸಬಹುದು.

ಪಾರ್ಕ್‌, ಜಿಮ್, ಆಟದ ಮೈದಾನದಂಥ ಸ್ಥಳಗಳ ಬಳಿ ಅಂಗಡಿ ತೆರೆದರೆ, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದು. ಈ ಉದ್ಯಮಕ್ಕೆ ಹೆಚ್ಚಿನ ಬಂಡವಾಳವೂ  ಬೇಕಿಲ್ಲ. ಗ್ರಾಹಕರ ಸಂಖ್ಯೆಗೆ ತಕ್ಕಂತೆ, ಮಿಕ್ಸರ್‌ಗಳು ಮತ್ತು ಗ್ಲಾಸುಗಳನ್ನು ಖರೀದಿಸಿದರೆ ಸಾಕಾಗುತ್ತದೆ. ತಾಜಾ ಹಣ್ಣುಗಳನ್ನು ಖರೀದಿಸಬೇಕಾದದ್ದು ತುಂಬಾ ಮುಖ್ಯ. ಜೊತೆಗೆ ಯಾವ ಯಾವ ಹಣ್ಣಿನಲ್ಲಿ ಯಾವ ಯಾವ  ಪೋಷಕಾಂಶಗಳಿವೆ ಎಂಬಿತ್ಯಾದಿ ಮಾಹಿತಿ ನೀಡುವ ಫಲಕಗಳನ್ನು, ಪೋಸ್ಟರ್‌ ತೂಗು ಹಾಕಿದರೆ ಗ್ರಾಹಕರಲ್ಲಿ ಜಾಗೃತಿಯೂ ಮೂಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next