ಹುಣಸೂರು: ತಾಲೂಕಿನ ಒಡ್ಡಬಾಳು ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆಯ ಬಲಗಣ್ಣಿನ ಮೇಲೆ ಗುಳ್ಳೆಯಾಗಿದ್ದನ್ನು ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದುಹಾಕಿದ್ದಾರೆ.
ತಾಲೂಕಿನ ವಡ್ಡಂಬಾಳು ಗ್ರಾಮದ ಸುತ್ತಮುತ್ತಲಿನಲ್ಲಿ ಸಾಕುನಾಯಿ. ಜಾನುವಾರುಗಳನ್ನು ಕೊಂದು, ತಿಂದು ಹಾಕುತ್ತಿದ್ದ ಚಿರತೆ ಸೆರೆಗೆ ಗ್ರಾಮದ ಜಮೀನಿನಲ್ಲಿ ಬೋನ್ ಇರಿಸಲಾಗಿತ್ತು.ಬೋನಿನಲ್ಲಿ ಮಂಗಳವಾರ ರಾತ್ರಿ ಚಿರತೆ ಬಂದಿಯಾಗಿತ್ತು.
ಬುಧವಾರದಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಸಿಕ್ಕ ಚಿರತೆಯನ್ನು ಅರಣ್ಯಕ್ಕೆ ಬಿಡುವ ವೇಳೆ ಬಲ ಕಣ್ಣಿನಲ್ಲಿ ಗುಳ್ಳೆ ಪತ್ತೆಯಾಗಿತ್ತು.
ಕಾಲಿಗೂ ಗಾಯವಾಗಿತ್ತು.
ಅರಣ್ಯ ಇಲಾಖೆಯ ನಾಗರಹೊಳೆ ವನ್ಯಜೀವಿ ವಿಭಾಗದ ಪಶು ವೈದ್ಯ ಡಾ.ರಮೇಶ್ ಚಿಕಿತ್ಸೆ ನೀಡಿ ಕಣ್ಣಿನಲ್ಲಿ ಆಗಿದ್ದ ಗುಳ್ಳೆಯನ್ನು ತೆಗೆದು ಹಾಕಿದ್ದು,ಕಾಲಿನ ಗಾಯಕ್ಕೆ ಚಿಕಿತ್ಸೆ ನೀಡಿದ್ದಾರೆ.
ಚೇತರಿಸಿಕೊಂಡ ನಂತರ ಚಿರತೆಯನ್ನು ಅರಣ್ಯಕ್ಕೆ ಬಿಡಲಾಗುವುದೆಂದು ಆರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.