Advertisement

ಚಾಟಿಬಿಲ್ಲಿನಿಂದ ಅಪಹರಣ ತಪ್ಪಿಸಿದ ಬಾಲಕ

11:25 PM May 14, 2023 | Team Udayavani |

ವಾಷಿಂಗ್ಟನ್‌: ಅಮೆರಿಕದ ಮಿಚಿಗನ್‌ ರಾಜ್ಯದ 13 ವರ್ಷದ ಬಾಲಕನೊಬ್ಬ ಚಾಟಿ ಬಿಲ್ಲಿನ ಸಹಾಯದಿಂದ ತನ್ನ ಸಹೋದರಿಯ ಅಪಹರಣತಪ್ಪಿಸಿದ್ದು, ಆತನ ಸಮಯಪ್ರಜೆ`ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅಲ್ಪೆನಾ ಎಂಬ ನಗರದಲ್ಲಿ 17 ವರ್ಷದ ಯುವಕನೊಬ್ಬ 8 ವರ್ಷದ ಬಾಲಕಿಯನ್ನು ಅಪಹರಿಸಲು ಪ್ರಯತ್ನಿಸಿದ್ದಾನೆ. ಮಗು ಹಿತ್ತಲಿನಲ್ಲಿ ಆಟವಾಡುತ್ತಿದ್ದ ವೇಳೆ ಆಕೆಯ ಬಾಯಿಮುಚ್ಚಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಇದೇ ಸಮಯಕ್ಕೆ ಬಾಲಕಿಯ ಸಹೋದರ 13 ವರ್ಷದ ಬಾಲಕ, ತನ್ನ ಚಾಟಿ ಬಿಲ್ಲಿನಿಂದ ಅಪಹರಣಕೋರನ ತಲೆಗೆ ಕಲ್ಲುತೂರಿ ತಂಗಿಯನ್ನು ಬಚಾವ್‌ ಮಾಡಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next