ಬೀಜಿಂಗ್: ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿರುವ ಚೀನಾದಲ್ಲಿ 2021ರಲ್ಲಿ ಜನಸಂಖ್ಯೆಯಲ್ಲಿ 5 ಲಕ್ಷಕ್ಕಿಂತ ಕಡಿಮೆ ಏರಿಕೆ ಕಂಡುಬಂದಿದೆ.
2020ರಲ್ಲಿ 1.4120 ಬಿಲಿಯನ್ ಇದ್ದ ಜನಸಂಖ್ಯೆ 2021ರ ಅಂತ್ಯಕ್ಕೆ 1.4126 ಬಿಲಿಯನ್‌ಗೆ ಏರಿಕೆಯಾಗಿದೆ.
ಕೇವಲ 4.80 ಲಕ್ಷ ಜನರು ಹೆಚ್ಚಿದ್ದಾಗಿ ನ್ಯಾಷನಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್(ಎನ್‌ಎಸ್‌ಬಿ) ವರದಿ ಮಾಡಿದೆ. 2020ರಲ್ಲಿ ಜನಸಂಖ್ಯೆ 1.2 ಕೋಟಿ ಏರಿಕೆಯಾಗಿತ್ತು.
ಕಳೆದ ಐದು ವರ್ಷಗಳಿಂದಲೂ ಚೀನಾದ ಜನನ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. 2021ರಲ್ಲಿ 1.062 ಕೋಟಿ ಮಕ್ಕಳು ಹುಟ್ಟಿವೆ.
ಸಾವಿರಕ್ಕೆ ಶೇ.7.52 ಜನನ ಪ್ರಮಾಣವಿದೆ. ಮರಣ ಪ್ರಮಾಣ ಸಾವಿರಕ್ಕೆ ಶೇ.7.18ರಷ್ಟಿದೆ.