Advertisement

ಅವನಿಗಿಂತ ದೊಡ್ಡ ವಿಶ್ವ!

05:34 AM May 19, 2020 | Lakshmi GovindaRaj |

ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷನಾಗಿ ಆಯ್ಕೆಯಾದಾಗ, ಥಿಯೋಡೊರ್‌ ರೂಸ್‌ವೆಲ್ಟ್‌ಗೆ ಕೇವಲ 43 ವರ್ಷ ವಯಸ್ಸು. ಸತತ ಎರಡು ಅವಧಿಗಳಿಗೆ (1901-09) ಆತ ದೇಶದ ಚುಕ್ಕಾಣಿ ಹಿಡಿದಿದ್ದ. ಚೆನ್ನಾಗಿ ವ್ಯವಹರಿಸು. ಆದರೆ  ಕಂಕುಳಲ್ಲಿ ದೊಡ್ಡ ದೊಣ್ಣೆ ಇಟ್ಟುಕೊಂಡಿರು ಎಂಬುದು ಅವನ ರಾಜತಾಂತ್ರಿಕ ನೀತಿ. ರೂಸ್‌ವೆಲ್ಟ್‌ ನೇತೃತ್ವದಲ್ಲಿ ಅಮೆರಿಕವು, ಲ್ಯಾಟಿನ್‌ ಅಮೆರಿಕನ್‌ ದೇಶಗಳ ಮೇಲೆ, ಪನಾಮಾ ಕಾಲುವೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.

Advertisement

ಸೈನಿಕ ಮತ್ತು ಬೇಟೆಗಾರನಾಗಿಯೂ ರೂಸ್‌ವೆಲ್ಟ್‌ ಪ್ರಸಿದಟಛಿ. ಅವನ ಬಹಳ ಇಷ್ಟದ ಹವ್ಯಾಸ ಎಂದರೆ ಮಾತಾಡುವುದು! ವಾಚಾಳಿತನ, ಅವನ ವ್ಯಕ್ತಿತ್ವದ ಭಾಗವೇ ಆಗಿತ್ತು. ಪ್ರತಿ ರಾತ್ರಿ ಮಲಗುವ ಮುನ್ನ, ಅಂಗಳಕ್ಕೆ ಬಂದು ಆಕಾಶ  ನೋಡುತ್ತಿದ್ದನಂತೆ ರೂಸ್‌ವೆಲ್ಟ್‌. ಒಮ್ಮೆ ತನ್ನ ಗೆಳೆಯ ಮತ್ತು ಜೀವವಿಜ್ಞಾನಿ ವಿಲಿಯಂ ಬೀಬ್‌ ಜೊತೆ, ಅಂಗಳದಲ್ಲಿ ನಿಂತು ಆಕಾಶ ನೋಡಿ ಹೇಳಿದನಂತೆ: “ನೋಡು, ಅಲ್ಲಿ ಉತ್ತರದ ಆಕಾಶದಲ್ಲಿ ಕಾಣಿಸ್ತಿದೆಯಲ್ಲ, ಅದೇ ಪೆಗಾಸಸ್‌  ನಕ್ಷತ್ರಪುಂಜ.

ಅದರ ತಲೆಯ ಭಾಗದಲ್ಲಿ ಕಾಣಿದೆ ನೋಡು ಒಂದಷ್ಟು ಬೆಳಕಿನ ರಾಶಿ… ಅದು ಆಂಡ್ರೊಮಿಡ. ಅದು ನಮ್ಮ ಹಾಲುಹಾದಿ ಗ್ಯಾಲಕ್ಸಿಯಷ್ಟೇ ದೊಡ್ಡದು. ವಿಶ್ವದಲ್ಲಿರುವ ನೂರು ಕೋಟಿ ಗ್ಯಾಲಕ್ಸಿಗಳ ಪೈಕಿ ಅದೂ ಒಂದು.  ಅದರೊಳಗೆ ಸಾವಿರ ಕೋಟಿ ಸೂರ್ಯರಿದ್ದಾರೆ. ಪ್ರತಿಯೊಂದೂ ನಮ್ಮ ಸೂರ್ಯನಿಗಿಂತ ದೊಡ್ಡದು.’ ಇಷ್ಟು ಹೇಳಿದ ಮೇಲೆ ರೂಸ್‌ವೆಲ್ಟ್‌ ಬೀಬ್‌ನತ್ತ ತಿರುಗಿ ಹೇಳಿದ: “ಇಷ್ಟು ನೋಡಿದ ಮೇಲೆ ಈಗ, ನನಗೆ ನಾನು ಚಿಕ್ಕವನು ಅನ್ನುವ ಭಾವ ಬಂತು ಕಣಯ್ಯ. ಇನ್ನು  ಮಲಗೋಣ.’

* ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next