Advertisement
2008 ರಲ್ಲಿ ಪ್ರಾರಂಭವಾದ ಮತ್ತು 2016 ರಿಂದ ”ಹ್ಯಾಪಿ ಬೆಲ್ಲಿ” ಎಂಬ ಟ್ರೇಡ್‌ಮಾರ್ಕ್ ಅನ್ನು ಹೊಂದಿರುವ ಕಂಪನಿಯು ಅಮೆಜಾನ್ ವಿರುದ್ಧ ಬೇಕರಿ ವಸ್ತುಗಳು, ತಿಂಡಿಗಳು ಮತ್ತು ಡೈರಿಗಳನ್ನು ಮಾರಾಟ ಮಾಡುವ ಒಂದೇ ರೀತಿಯ ಬ್ರಾಂಡ್ ಹೆಸರನ್ನು ಬಳಸುವುದಕ್ಕಾಗಿ ಮೊಕದ್ದಮೆ ಹೂಡಿತ್ತು.ಬೆಂಗಳೂರು ಮೂಲದ ಕಂಪನಿ ಪರವಾಗಿ ಸಿಟಿ ಸಿವಿಲ್ ನ್ಯಾಯಾಲಯ ಆಗಸ್ಟ್ 30ರಂದು ತೀರ್ಪು ನೀಡಿತ್ತು.
Related Articles
Advertisement
ಒಂದೇ ರೀತಿಯ ಹೆಸರನ್ನು ಕಂಡುಹಿಡಿದ ನಂತರ, ಹಿಂದುಜಾ Amazon Seller Services, Cloudtail India, ಮತ್ತು Tootsie LLC ವಿರುದ್ಧ ಮೊಕದ್ದಮೆ ಹೂಡಿದರು. ಇ-ಕಾಮರ್ಸ್ ದೈತ್ಯ ಪರವಾಗಿ ಟೂಟ್ಸಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ಉಲ್ಲಂಘನೆಯ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಅಮೆಜಾನ್ ಹ್ಯಾಪಿ ಬೆಲ್ಲಿ ಬ್ರಾಂಡ್ ಹೆಸರಿನಲ್ಲಿ ತನ್ನ ವ್ಯವಹಾರವು ಹಿಂದುಜಾ ನಡೆಸುತ್ತಿರುವ ವ್ಯವಹಾರಕ್ಕಿಂತ ಭಿನ್ನವಾಗಿದೆ ಎಂದು ವಾದಿಸಿತು.ಇದರ ಜತೆಗೆ, ಹ್ಯಾಪಿ ಬೆಲ್ಲಿ ಬೇಕ್ಸ್ ಬೆಂಗಳೂರಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, ನಾವು ತಮ್ಮ ಉತ್ಪನ್ನಗಳಿಗೆ ವಿಶ್ವಾದ್ಯಂತ ಟ್ರೇಡ್‌ಮಾರ್ಕ್ ಅನ್ನು ಬಳಸುತ್ತಿದ್ದೇವೆ ಎಂದು ಕ್ಲೌಡ್‌ಟೈಲ್ ಮತ್ತು ಟೂಟ್ಸಿ ಹೇಳಿದ್ದಾರೆ.
ಅಂತಿಮವಾಗಿ, ಆಗಸ್ಟ್ 30 ರಂದು, ಸಿವಿಲ್ ನ್ಯಾಯಾಲಯವು ಹ್ಯಾಪಿ ಬೆಲ್ಲಿ ಬೇಕ್ಸ್ ಪರವಾಗಿ ತೀರ್ಪು ಪ್ರಕಟಿಸಿತು ಮತ್ತು ಅಮೆಜಾನ್ ಬೆಂಗಳೂರು ಮೂಲದ ಬೇಕರಿಯ ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಿದೆ ಎಂದು ಗಮನಿಸಿತು.