ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ, ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ ಅವರ ಒಡೆತನದ ಲಾರಿಯನ್ನು ಭಕ್ತಿಪೂರ್ವಕವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇಗುಲದ ವಸ್ತು ಸಂಗ್ರಹಾಲಯಕ್ಕೆ ನ.15 ರಂದು ಡಾ| ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರಿಸಿದರು.
ವಾಹನವನ್ನು ನೋಡಿ ಸಂತಸ ವ್ಯಕ್ತಪಡಿಸಿದ ಡಾ| ವೀರೇಂದ್ರ ಹೆಗ್ಗಡೆ
ವಾಹನವು ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇಗುಲದ ಸಮೀಪದಲ್ಲಿ ನಿಂತಿರುವ ಈ ಹಳೆಯದಾದ ವಾಹನವನ್ನು ನೋಡಿದ ಪೂಜ್ಯ ಖಾವಂದರು ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ ಬಳಿ ವಾಹನದ ವಿವರವನ್ನು ಪಡೆದುಕೊಂಡರು. ನಂತರ ವಾಹನ ಚಾಲನೆ ಮಾಡುವಂತೆ ಹೇಳಿದಾಗ ಒಂದೇ ಕ್ಷಣದಲ್ಲಿ ಸ್ಟಾರ್ಟ್ ಆಗಿರುವುದು ನೋಡಿ ತೀವ್ರ ಸಂತಸ ವ್ಯಕ್ತಪಡಿಸಿದರು.
ಬೇಡಿಕೆಯ ವಾಹನ
1976ರಲ್ಲಿ ಶ್ರೀ ಮಹಾದೇವಿ ಪ್ರಸಾದ್ ಮಲ್ಯಾಡಿ ಎನ್ನುವ ಟ್ರಾನ್ಸ್‌ಪೋರ್ಟ್ ಉದ್ಯಮ ಆರಂಭಿಸಿದ ದಿನದಿಂದಲೂ ಜತೆಗಿದ್ದ ಈ ಹಳೆಯದಾದ 1210ಡಿ ಟಾಟಾ ವಾಹನವನ್ನು ಅತ್ಯಂತ ಪ್ರೀತಿ ಜತೆಗಿರಿಸಿಕೊಂಡು ಉತ್ತಮವಾಗಿ ನಿರ್ವಹಿಸಿಕೊಂಡು ಬಂದಿದ್ದರು. ಮಲ್ಯಾಡಿಯಲ್ಲಿ ಶ್ರೀ ಶ್ರೀಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ನಡೆಯುತ್ತಿರುವ ಸಂದರ್ಭದಲ್ಲಿ ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ ಅವರ ಬಳಿ ಇರುವ ಅತ್ಯಂತ ಹಳೆಯದಾದ ಈ ವಾಹನವನ್ನು ಛಾಯಾಚಿತ್ರವನ್ನು ನೋಡಿದ ಧರ್ಮದರ್ಶಿ ಡಾ| ವೀರೇಂದ್ರ ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿ ವಾಹನವನ್ನು ಸಂಗ್ರಹಾಲಯಕ್ಕೆ ತರುವ ಎಲ್ಲಾ ಸಿದ್ಧತೆಯನ್ನು ಮಾಡಲಾಗಿದೆ. ಸಿದ್ದಗೊಂಡ ವಾಹನ ಧರ್ಮಸ್ಥಳದತ್ತ ಸಂಚರಿಸುತ್ತಿರುವ ಸಂದರ್ಭದಲ್ಲಿ ವಾಹನದ ಹಿಂದಿನಿಂದ ಕಾರಿನಲ್ಲಿ ಬಂದ ವ್ಯಕ್ತಿಯೋರ್ವರು ಈ ವಾಹನ ನಮಗೆ ನೀಡಿ ರೂ.5ಲಕ್ಷ ನೀಡುವುದಾಗ ಬೇಡಿಕೆ ಕೂಡಾ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಕೇರಳ ಮಲಗೆ 3 ಬಲಿ, ಅಪಾರ ಆಸ್ತಿಪಾಸ್ತಿ ಹಾನಿ
ವಾಹನಗಳ ಸಿದ್ದತೆಯಲ್ಲಿ ನುರಿತ ಮೆಕಾನಿಕ್‌ಗಳ ಶ್ರಮ
ನುರಿತ ಮೆಕಾನಿಕ್ ಕೊರವಡಿ ಕೃಷ್ಣಯ್ಯ ಆಚಾರ್ಯ ಅವರು ಈ ವಾಹನದ ಎಂಜಿನ್ ಕಾರ್ಯದಕ್ಷತೆಯನ್ನು ಹೆಚ್ಚಿಸುವಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ. ತೆಕ್ಕಟ್ಟೆ ಮಲ್ಯಾಡಿಯ ಶ್ರೀ ಗಜಾನನ ಟ್ರಕ್ ಬಾಡಿ ಬಿಲ್ಡರ್ ಮಂಜುನಾಥ ಆಚಾರ್ಯ ಹಾಗೂ ಅವರ ಮಕ್ಕಳು ಸೇರಿ ಲಾರಿಯ ಬಾಡಿ ರಚನೆ ಹಾಗೂ ಬಣ್ಣಗಳನ್ನು ಲೇಪಿಸಿ ವಾಹನದ ನೈಜ್ಯ ಸ್ವರೂಪವನ್ನು ತರುವಲ್ಲಿ ಶ್ರಮಿಸಿದ್ದಾರೆ.