Advertisement
ಪ್ರಸಕ್ತ ನ.1ರಿಂದ ಮುಂದಿನ ಅ.31ರವರೆಗೆ ಒಂದು ವರ್ಷದ ಕಾಲ “ಕನ್ನಡ ಕಾಯಕ ವರ್ಷ’ಆಚರಿಸುತ್ತಿರುವ ರಾಜ್ಯ ಸರ್ಕಾರ, ಕನ್ನಡಭಾಷೆ ಬಳಕೆ ಹಾಗೂ ಕನ್ನಡ ಭಾಷೆ ಉಳಿಸಲು ಕೈಗೊಂಡ 19 ಪ್ರಮುಖ ಅಂಶಗಳನ್ನೊಳಗೊಂಡ ಸುತ್ತೋಲೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹೊರಡಿಸಿದ್ದಾರೆ.
Related Articles
Advertisement
ಸರ್ಕಾರಿ ಮುದ್ರಣಾಲಯ ಹಾಗೂ ಸರ್ಕಾರಿಇಲಾಖೆಗಳು ಮುದ್ರಿಸುವ ತಲೆಬರಹಗಳು, ನಮೂನೆಗಳು, ಪೂರಕ ಸಾಮಗ್ರಿಗಳು, ಪ್ರಕಟಣೆಗಳು, ಜಾಹೀರಾತುಗಳಲ್ಲಿ “ಕನ್ನಡ ಕಾಯಕ ವರ್ಷ’ ಹಾಗೂ ವರ್ಷಾಚರಣೆಯ ಲಾಂಛನ ಬಳಸಬೇಕು. ಸಮಗ್ರ ಕನ್ನಡ ಅನುಷ್ಠಾನ ಹಾಗೂ ಬಳಕೆ ಪ್ರೋತ್ಸಾಹಿಸಲು ಆಯಾ ಇಲಾಖೆಗಳು ಕನ್ನಡಕ್ಕೆ ಸಂಬಂಧಿಸಿದ ಮಹತ್ವದ ಮತ್ತು ವಿವಿಧ ವಿಷಯಗಳ ಪದಕೋಶಸಂಗ್ರಹ ಮಾಡಿ ಡಿಜಿಟಲ್ ಮಾದರಿಯಲ್ಲಿ ತಮ್ಮ ಅಧಿಕೃತ ಜಾಲತಾಣಗಳಲ್ಲಿ ಪ್ರಕಟಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಪುಟದಲ್ಲಿ ಕನ್ನಡ ರಾರಾಜಿಸಲಿ: ರಾಜ್ಯ
ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳ ಜಾಲತಾಣಗಳು ಹಾಗೂ ಸಾಮಾಜಿಕ ತಾಣಗಳ ಪ್ರಧಾನ ಪುಟಗಳನ್ನು ಕನ್ನಡದಲ್ಲಿಯೇ
ರೂಪಿಸಬೇಕು. ಒಳಪುಟಗಳ ಮಾಹಿತಿಗಳೆಲ್ಲವೂ ಕನ್ನಡದಲ್ಲಿಯೇ ಇರಬೇಕು. ನಾಮಫಲಕ, ಹೆದ್ದಾರಿ ಫಲಕ, ರಸ್ತೆ ಮಾರ್ಗಸೂಚಿ ಹಾಗೂ ಮೈಲಿಗಲ್ಲುಗಳಲ್ಲಿ ಕಡ್ಡಾಯವಾಗಿ ಶುದ್ಧ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತಕ್ರಮ ವಹಿಸಬೇಕು. ಕಾನೂನು, ಶಾಸನಗಳು, ವಿಧೇಯಕಗಳು, ಸಚಿವ ಸಂಪುಟದ ಟಿಪ್ಪಣಿಗಳು, ಅಧಿಸೂಚನೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಹೊರಡಿಸಬೇಕು. ರಾಜ್ಯದಲ್ಲಿ ಮಾರಾಟವಾಗುವ ಉತ್ಪನ್ನಗಳು, ಪದಾರ್ಥಗಳಮೇಲೆ ಮಾಹಿತಿ, ವಿವರಗಳನ್ನು ಕನ್ನಡದಲ್ಲಿಯೇ ಮುದ್ರಿಸುವಂತೆ ಸೂಚಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.
ಕನ್ನಡ ಕಾಯಕ ವರ್ಷದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲ ಇಲಾಖೆಗಳಿಗೂ ಸುತ್ತೋಲೆ ಹೊರಡಿಸಿದ್ದಾರೆ.ಇದರ ಯಶಸ್ಸಿಗೆ ಎಲ್ಲರ ಸಹಭಾಗಿತ್ವ ಮುಖ್ಯವಾಗಿದೆ. ಇಲಾಖಾಧಿಕಾರಿಗಳು ಯಾವುದೇ ನೆಪ ಹೇಳದೆ ಶೇ.100ಅನುಷ್ಠಾನಗೊಳಿಸಬೇಕು.–ಟಿ.ಎಸ್.ನಾಗಾಭರಣ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ