Advertisement

ಕರಾಚಿಯಲ್ಲಿ 150 ವರ್ಷಗಳ ಹಳೆಯ ಹಿಂದೂ ದೇವಾಲಯ ನೆಲಸಮ

09:33 PM Jul 16, 2023 | Team Udayavani |

ಕರಾಚಿ: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಪ್ರಾಂತೀಯ ರಾಜಧಾನಿ ಕರಾಚಿಯಲ್ಲಿ 150 ವರ್ಷಗಳ ಹಳೆಯ ಹಿಂದೂ ದೇವಾಲಯವನ್ನು ಸ್ಥಳೀಯ ಆಡಳಿತ ನೆಲಸಮಗೊಳಿಸಿದ್ದು, ಇದು ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಬಿಗಿ ಪೊಲೀಸ್‌ ಭದ್ರತೆಯಲ್ಲಿ ಕರಾಚಿಯ ಸೋಲ್ಜರ್‌ ಬಜಾರ್‌ನಲ್ಲಿರುವ ಪುರಾತನ ಮಾರಿ ಮಾತಾ ದೇಗುಲವನ್ನು ಶುಕ್ರವಾರ ಮಧ್ಯರಾತ್ರಿ ಬುಲ್ಡೋಜರ್‌ಗಳ ಸಹಾಯದಿಂದ ನೆಲಸಮಗೊಳಿಸಲಾಯಿತು. “ಕಟ್ಟಡ ಹಳೆಯದಾಗಿದ್ದು, ಅಪಾಯಕಾರಿ ರಚನೆ’ ಎಂಬ ಕಾರಣವನ್ನು ಸ್ಥಳೀಯ ಆಡಳಿತ ನೀಡಿ, ರಾತ್ರೋರಾತ್ರಿ ದೇಗುಲವನ್ನು ಕೆಡವಲಾಗಿದೆ.
“ನಮಗೆ ಯಾವುದೇ ಮಾಹಿತಿ ನೀಡದೆ, ಮಧ್ಯರಾತ್ರಿ ದೇಗುಲವನ್ನು ನೆಲಸಮಗೊಳಿಸಲಾಗಿದೆ. ದೇಗುಲದ ಜಾಗದ ಮೇಲೆ ಭೂಕಳ್ಳರು ಮೊದಲಿನಿಂದಲೂ ಕಣ್ಣು ಹಾಕಿದ್ದರು.

ಈ ಸ್ಥಳವನ್ನು ಅಕ್ರಮವಾಗಿ ಉದ್ಯಮಿಗಳಿಗೆ ಮಾರಾಟ ಮಾಡಲಾಗಿದೆ. ಇಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ದೇಗುಲವನ್ನು ಕೆಡವಲಾಗಿದೆ. ಹಿಂದೂಗಳು ಮತ್ತು ಹಿಂದೂ ದೇಗುಲಗಳಿಗೆ ರಕ್ಷಣೆ ಇಲ್ಲದಂತಾಗಿದೆ,’ ಎಂದು ಸಮೀಪದ ಶ್ರೀ ಪಂಚಮುಖೀ ಹನುಮಾನ್‌ ದೇಗುಲದ ಉಸ್ತುವಾರಿ ರಾಮ್‌ನಾಥ್‌ ಮಿಶ್ರಾ ಮಹರಾಜ್‌ ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next