Advertisement
ಸಿನಿಮಾ ನೋಡಿ ಬಂದವರು ಎರಡು ದಿನ ಕಳೆದರೂ ಅದರ ಹಾಡು, ಸಂಭಾಷಣೆಯನ್ನು ಗುನುಗುತ್ತಿರುತ್ತಾರೆ. ಸಿನಿಮಾ ವ್ಯಕ್ತಿಯ ಚಾರಿತ್ರ ನಿರ್ಮಾಣಕ್ಕೆ ಅನುಕೂಲವಾದ ಮಾಧ್ಯಮ. ಹೀಗಾಗಿ ಉತ್ತಮ ಚಿತ್ರಗಳನ್ನು ಸಮಾಜಕ್ಕೆ ನೀಡುವುದು ನಿರ್ದೇಶಕನ ಜವಾಬ್ದಾರಿ. ಮನರಂಜನೆಯ ಜತೆಗೆ ವಿಚಾರಪೂರ್ಣ ಚಿತ್ರಗಳೂ ನಿರ್ಮಾಣವಾಗಬೇಕಿದೆ ಎಂದ ಅವರು, ಲಗಾನ್ ಚಿತ್ರವನ್ನು ಉದಾಹರಿಸಿದರು. ಪಾತ್ರಗಳಿಗೆ ಜೀವತುಂಬುವ ಕಲೆ ಎಲ್ಲರಿಗೂ ಬರುವುದಿಲ್ಲ. ಹೀಗಾಗಿ ಸಿನಿಮಾ ನೋಡುವ ಮೂಲಕ ಕಲಾವಿದರನ್ನು ಪೋ›ತ್ಸಾಹಿಸೋಣ ಎಂದರು.
Related Articles
Advertisement
ಪ್ರಶಸ್ತಿ: ಏಷ್ಯನ್ ಸಿನಿಮಾ ವಿಭಾಗದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು “ಎ ಪಾದರ್ ಮಿಲ್’ ತನ್ನದಾಗಿಸಿಕೊಂಡಿತು. ಪ್ರಶಸ್ತಿಯು 10,000 ಡಾಲರ್ ನಗದು ಬಹುಮಾನ ಒಳಗೊಂಡಿದೆ. ಕನ್ನಡ ಸಿನಿಮಾ ವಿಭಾಗದಲ್ಲಿ ಅಂತಾರಾಷ್ಟ್ರೀಯ ಜ್ಯೂರಿ ಬಹುಮಾನವನ್ನು ಬಿ.ಸುರೇಶ್ ನಿರ್ದೇಶನದ “ಉಪ್ಪಿನ ಕಾಗದ’ ಸಿನಿಮಾ ತನ್ನದಾಗಿಸಿಕೊಂಡಿತು. ಪ್ರಶಸ್ತಿಯು 1 ಲಕ್ಷ ರೂ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿತ್ತು. ಭಾರತೀಯ ಸಿನಿಮಾ ವಿಭಾಗದಲ್ಲಿ ಅನನ್ಯ ಕಾಸರವಳ್ಳಿ ನಿರ್ದೇಶನದ “ಹರಿಕಥಾ ಪ್ರಸಂಗ’ ಅತ್ಯುತ್ತಮ ಭಾರತೀಯ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪ್ರಶಸ್ತಿಯು 3 ಲಕ್ಷ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಭಾರತೀಯ ಸಿನಿಮಾ ವಿಭಾಗದ ವಿಶೇಷ ಜ್ಯೂರಿ ಪ್ರಶಸ್ತಿ ಮಂಗೇಶ್ ಜೋಶಿ ನಿರ್ದೇಶನದ ಲಾಥೆ ಜೋಶಿ ತನ್ನದಾಗಿಸಿಕೊಂಡಿತು. ಪ್ರಶಸ್ತಿಯು 2 ಲಕ್ಷ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಭಾರತೀಯ ಸಿನಿಮಾ ವಿಭಾಗದಲ್ಲಿ ಡಾ.ಬಿಜು ಕುಮಾರ್ ದಾಮೋದರನ್ ನಿರ್ದೇಶನದ ಮಲಯಾಳಿ ಚಿತ್ರ “ಕಾಡು ಪೂಕುನ್ನ ನೇರಮ್’ ತನ್ನದಾಗಿಸಿಕೊಂಡಿತು. ಪಿ.ಕೆ.ನಾಯರ್ ಸ್ಮಾರಕ ಕ್ರಿಟಿಕ್ಸ್ ಜ್ಯೂರಿ ಪ್ರಶಸ್ತಿ “ಲೇಡಿ ಆಫ್ ದಿ ಲೇಕ್’ ಚಿತ್ರಕ್ಕೆ ಸಂದಿತು.
ಕನ್ನಡ ಸಿನಿಮಾಗಳ ಪ್ರಶಸ್ತಿ ವಿಭಾಗ…ಕನ್ನಡ ಸಿನಿಮಾ ವಿಭಾಗದ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿಯು ರಾಮಾ ರಾಮಾ ರೇ (ಪ್ರಥಮ), 3 ಲಕ್ಷ ರೂ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿತ್ತು. ಪಲ್ಲಟ (ದ್ವಿತೀಯ) 2 ಲಕ್ಷ ರೂ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು (ತೃತೀಯ) 1 ಲಕ್ಷ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿತ್ತು. ಜನಪ್ರಿಯ ಮನರಂಜನೆಯ ಕನ್ನಡ ಸಿನಿಮಾ ವಿಭಾಗ: ಕೋಟಿಗೊಬ್ಬ-2 (ಪ್ರಥಮ) 4 ಲಕ್ಷ ರೂ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿಪತ್ರ. ಜಗ್ಗುದಾದ (ದ್ವಿತೀಯ) 3 ಲಕ್ಷ ರೂ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ. ದೊಡ್ಮನೆ ಹುಡುಗ (ತೃತೀಯ) 2 ಲಕ್ಷ ರೂ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ. ಮೈಸೂರಿಗೆ ತನ್ನದೇ ಆದ ಇತಿಹಾಸ ಇದೆ. ಇಲ್ಲಿನ ಒಂದೇ ರಸ್ತೆಯಲ್ಲಿ 14ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ. ಶಿಥಿಲಗೊಂಡಿದೆ ಎಂಬ ಕಾರಣಕ್ಕೆ ಲ್ಯಾನ್ಸ್‌ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ನೆಲಸಮಗೊಳಿಸದೆ ದುರಸ್ತಿಗೊಳಿಸಿ ಕಾಪಾಡಿಕೊಳ್ಳಿ.
-ಎಂ.ಎಸ್.ಸತ್ಯು, ಹಿರಿಯ ಚಿತ್ರ ನಿರ್ದೇಶಕ