Advertisement

ಎಸ್‌ಬಿಐಗೆ 973 ಕೋಟಿ ಪರಿಹಾರ; ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

12:15 AM Jan 20, 2022 | Team Udayavani |

ಹೊಸದಿಲ್ಲಿ: 2020ರಲ್ಲಿ ಕೊರೊನಾ ಸೋಂಕಿನಿಂದಾಗಿ ಸಾಲದ ಕಂತು ಮರು ಪಾವತಿ ಅವಧಿ ವಿಸ್ತರಣೆಗಾಗಿ ಗ್ರಾಹಕರಿಗೆ ನೆರವು ನೀಡಿದ ಎಸ್‌ಬಿಐಗೆ ಕೇಂದ್ರ ಸಂಪುಟ 973.74 ಕೋಟಿ ರೂ. ನೀಡಲು ಪರಿಹಾರ ನೀಡಲು ನಿರ್ಧರಿಸಲಾಗಿದೆ.

Advertisement

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಬಿಡುಗಡೆ ಮಾಡಿದ ಈ ಮೊತ್ತದಲ್ಲಿ ಇತರ ಬ್ಯಾಂಕ್‌ಗಳಿಗೂ ಪಾಲು ಸಿಗಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ನಿಗದಿತ ಸಾಲ ಪಡೆದವರಿಗೆ ಬಡ್ಡಿ ಪಾವತಿಸಲು ನೆರವಾ ಗಲು 5,500 ಕೋಟಿ ರೂ. ಮೊತ್ತವನ್ನು ಸರಕಾರ ನೀಡಿದೆ. ಈ ಪೈಕಿ 4,626.93 ಕೋಟಿ ರೂ.ಗಳನ್ನು 2020-21ನೇ ಸಾಲಿನಲ್ಲಿ ನೀಡಲಾಗಿದೆ ಎಂದರು. ಇದ ರಿಂದಾಗಿ 2020 ಮಾ.1ರಿಂದ ಆ.31ರ ಅವಧಿಯಲ್ಲಿ ವಿತರಿಸಲಾಗಿರುವ ಸಾಮಾನ್ಯ ಬಡ್ಡಿ ಹಾಗೂ ಚಕ್ರಬಡ್ಡಿ ನಡುವಿನ ವ್ಯತ್ಯಾಸದ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗಿದೆ.

ವಿಸ್ತರಣೆ: ರಾಷ್ಟ್ರೀಯ ಸಫಾಯಿ ಕರ್ಮ ಚಾರಿಗಳ ಆಯೋಗದ (ಎನ್‌ಸಿಎಸ್‌ಕೆ) ಅಧಿಕಾರಾವಧಿಯನ್ನು ಈ ವರ್ಷದ ಮಾ. 31ರ ಅನಂತರದಿಂದ ಮೂರು ವರ್ಷಗಳವರೆಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ. ಅದರಂತೆ, ಆಯೋಗದ ಅಧಿಕಾರಾವಧಿ 2025ರ ಮಾ. 31ಕ್ಕೆ ಕೊನೆಗೊಳ್ಳುತ್ತದೆ. ಜತೆಗೆ ಐಆರ್‌ಇಡಿಎ’ಗೆ 1,500 ಕೋಟಿ ರೂ.ಗಳ ಅನುದಾನ ನೀಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next