Advertisement

Independence Day; 230 ಶೌರ್ಯ ಸೇರಿ 954 ಪೊಲೀಸ್ ಸಿಬಂದಿಗೆ ಸೇವಾ ಪದಕ ಘೋಷಣೆ

02:12 PM Aug 14, 2023 | Team Udayavani |

ಹೊಸದಿಲ್ಲಿ : ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಕೇಂದ್ರ ಮತ್ತು ರಾಜ್ಯ ವಿವಿಧ ಪಡೆಗಳ 954 ಪೊಲೀಸ್ ಸಿಬಂದಿಗೆ ಸೋಮವಾರ ಸರಕಾರ ಸೇವಾ ಪದಕಗಳನ್ನು ಘೋಷಿಸಿದೆ.

Advertisement

ಕೇಂದ್ರ ಗೃಹ ಸಚಿವಾಲಯದ ಆದೇಶದ ಪ್ರಕಾರ, ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ (ಪಿಪಿಎಂಜಿ) ಸೇರಿದಂತೆ 230 ಸಿಬಂದಿಗೆ ಶೌರ್ಯ ಪದಕಗಳನ್ನು ನೀಡಲಾಗುತ್ತದೆ. ಸಿಆರ್‌ಪಿಎಫ್ ಅಧಿಕಾರಿ ಲೌಕ್ರಾಕ್‌ಪಾಮ್ ಇಬೊಮ್ಚಾ ಸಿಂಗ್ ಅವರಿಗೆ ಏಕೈಕ ಪಿಪಿಎಂಜಿ ಪದಕವನ್ನು ಘೋಷಿಸಲಾಗಿದೆ. ಸೇವೆಯಲ್ಲಿ ಇದು ಅವರ ಎರಡನೇ ಶೌರ್ಯ ಪದಕವಾಗಿದೆ.

ಇತರೆ ಪದಕಗಳಲ್ಲಿ 82 ರಾಷ್ಟ್ರಪತಿಗಳ ಗೌರವಾನ್ವಿತ ಸೇವೆಗಾಗಿ ಪೊಲೀಸ್ ಪದಕ ಮತ್ತು 642 ಮೆರಿಟೋರಿಯಸ್ ಸೇವೆಗಾಗಿ ಪೊಲೀಸ್ ಪದಕ ಸೇರಿವೆ.ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ (55) ಶೌರ್ಯಕ್ಕಾಗಿ ಗರಿಷ್ಠ ಸಂಖ್ಯೆಯ ಪೊಲೀಸ್ ಪದಕಗಳನ್ನು ಘೋಷಿಸಲಾಗಿದೆ (55), ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಪೊಲೀಸ್ (33), ಕೇಂದ್ರೀಯ ಮೀಸಲು ಪೊಲೀಸ್ ಪಡೆ (27) ಮತ್ತು ಛತ್ತೀಸ್‌ಗಢ ಪೊಲೀಸ್ (24) ಪದಕಗಳನ್ನು ನೀಡಲಾಗುತ್ತಿದೆ.

ಈ ಪದಕಗಳನ್ನು ವರ್ಷಕ್ಕೆ ಎರಡು ಬಾರಿ, ಸ್ವಾತಂತ್ರ್ಯ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next