Advertisement
3,840 ಕೋವಿ ಜಮೆಉಡುಪಿ ಜಿಲ್ಲೆಯಲ್ಲಿ 4,757 ಮಂದಿ ಶಸ್ತ್ರಾಸ್ತ್ರ ಇರಿಸಿಕೊಳ್ಳಲು ಪರವಾನಿಗೆ ಹೊಂದಿದ್ದು, 4 ಸಾವಿರ ಶಸ್ತ್ರಾಸ್ತ್ರಗಳು ಮಾತ್ರ ಇವೆ. ಅವುಗಳಲ್ಲಿ 3,840 ಕೋವಿಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ಜಮಾ ಆಗಿವೆ. ಉಳಿದ ಕೋವಿಗಳನ್ನು ಕೆಲವು ಸೆಕ್ಯೂರಿಟಿ ಗಾರ್ಡ್ ಮತ್ತು ಜ್ಯುವೆಲ್ಲರಿ ಅಂಗಡಿಗಳ ಮಾಲಕರಿಗೆ ವಿಶೇಷ ಪ್ರಕರಣದಲ್ಲಿ ನೀಡಲಾಗಿದೆ ಎಂದು ಉಡುಪಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಉದಯವಾಣಿಗೆ ತಿಳಿಸಿದ್ದಾರೆ. ಇನ್ನು 4,697 ನವೀಕರಣಗೊಳ್ಳದ ಪರವಾನಿಗೆಗಳಿವೆ. 17 ಪರವಾನಿಗೆಗಳು ವರ್ಗಾವಣೆಗೊಂಡಿವೆ. 34 ಶಸ್ತ್ರಾಸ್ತ್ರ ಪರವಾನಿಗೆ ಹೊಂದಿದ ವ್ಯಕ್ತಿಗಳು ಮೃತಪಟ್ಟಿದ್ದಾರೆ. 8 ಪರವಾನಿಗೆಗಳು ಸರಂಡರ್ ಆಗಿವೆ.
ಪ್ರಾಣಾಪಾಯ ಇದ್ದು ಆತ್ಮರಕ್ಷಣೆಗಾಗಿ ಬಂದೂಕು ಹೊಂದಿರುವುದು ಅತೀ ಅಗತ್ಯವೆಂದು ಕಂಡುಬಂದಲ್ಲಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಬಹುದು. ಜಿಲ್ಲಾಧಿಕಾರಿಗಳು ಸತ್ಯಾಸತ್ಯತೆಯನ್ನು ಅರಿತು ಶಸ್ತ್ರಾಸ್ತ್ರ ಹೊಂದಿರಲು ಅನುಮತಿ ನೀಡಬಹುದು. ಇಲ್ಲವೇ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿ ನ್ಯಾಯಾಧೀಶರು ಸಮ್ಮತಿಸಿದರೆ ಇರಿಸಿಕೊಳ್ಳಬಹುದಾಗಿದೆ ಎಂದು ಎಸ್.ಪಿ ತಿಳಿಸಿದ್ದಾರೆ. ರಾಜ್ಯದಲ್ಲಿ 94 ಸಾವಿರ ಪರವಾನಿಗೆದಾರರು
ರಾಜ್ಯದಲ್ಲಿ ಒಟ್ಟು 94,454 ಮಂದಿ ಶಸ್ತ್ರಾಸ್ತ್ರ ಇರಿಸಿಕೊಳ್ಳಲು ಪರವಾನಿಗೆ ಹೊಂದಿದ್ದಾರೆ. ಕಾರವಾರದಲ್ಲಿ ಪರವಾನಿಗೆ ಪಡೆದು ಬಂದೂಕು ಹೊಂದಿದವರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಅಲ್ಲಿ 10,226 ಶಸ್ತ್ರಾಸ್ತ್ರಗಳಿವೆ.
Related Articles
ಭಾರತೀಯ ಶಸ್ತ್ರಾಸ್ತ್ರ ಕಾನೂನು 1959ರ ಪ್ರಕಾರ ಪರವಾನಿಗೆ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಹೊಂದುವುದು ಅಪರಾಧ. ಪರವಾನಿಗೆ ಪಡೆದು ಕೋವಿ, ರಿವಾಲ್ವರ್ ಇರಿಸಿಕೊಳ್ಳಬಹುದಾದರೂ, ಚುನಾವಣೆಯಂತಹ ಸಂದರ್ಭಗಳಲ್ಲಿ ಅವುಗಳನ್ನು ಜಮೆ ಮಾಡಬೇಕು. ಹಾಗೆ ಮಾಡದೇ ಇರುವುದೂ ಅಪರಾಧವಾಗುತ್ತದೆ.
Advertisement
— ಆಸ್ಟ್ರೋ ಮೋಹನ್