Advertisement

ಒಂದೇ ತಿಂಗಳಲ್ಲಿ 931 ಭೂಮಿ ಪ್ರಕರಣ ಇತ್ಯರ್ಥ

12:44 PM Mar 11, 2022 | Team Udayavani |

ಕಲಬುರಗಿ: ಜಿಲ್ಲೆಯಾದ್ಯಂತ ಕಳೆದ ಫೆಬ್ರವರಿ ತಿಂಗಳಲ್ಲಿ ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ ವಿವಿಧ ಕಾಯ್ದೆ ಕಲಂಗಳಡಿ ದಾಖಲಾದ ಅರೆ ನ್ಯಾಯಾಲಯ ಪ್ರಕರಣಗಳ ಪೈಕಿ ಬಾಕಿಯಿದ್ದ 2067 ಭೂಮಿ ಪ್ರಕರಣಗಳಲ್ಲಿ 931 ಪ್ರಕರಣಗಳನ್ನು ದಾಖಲೆ ಪ್ರಮಾಣದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ತಹಶೀಲ್ದಾರ, ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಹಂತದ ನ್ಯಾಯಾಲಯಗಳಲ್ಲಿ ಪಹಣಿ, ಪೋಡಿ ಹೀಗೆ ಜಮೀನಿಗೆ ಸಂಬಂಸಿದ ಪ್ರಕರಣಗಳನ್ನು ಅದ್ಯತೆ ಮೇಲೆ ವಿಲೇವಾರಿ ಮಾಡಲಾಗಿದೆ. ಇದು ಐತಿಹಾಸಿಕ ದಾಖಲಾಗಿದೆ ಎಂದರು.

ಉಕ್ರೇನ್‌ದಿಂದ ಆರು ಜನ ತಾಯ್ನಾಡಿಗೆ

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ ಜಿಲ್ಲೆಯ ಆರು ಜನ ಪೈಕಿ ನಾಲ್ವರು ಕಲಬುರಗಿಗೆ ಮರಳಿದ್ದು, ಇಬ್ಬರು ಬೀದರ ಜಿಲ್ಲೆಗೆ ವಾಪಸಾಗಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next