Advertisement

MIT ಪ್ರಾಧ್ಯಾಪಕರಿಗೆ ಮೀನುಗಳ ಪ್ರಮಾಣ ಅಧ್ಯಯನಕ್ಕೆ 93 ಲಕ್ಷ ರೂ. ಅನುದಾನ

07:03 PM Oct 12, 2023 | Team Udayavani |

ಮಣಿಪಾಲ: ಉಡುಪಿ ಜಿಲ್ಲಾ ಕರಾವಳಿಯ ಮೀನು ಸಂಭವನಾ ಕ್ಷೇತ್ರಗಳ ಅಧ್ಯಯನಕ್ಕೆ ಮಣಿಪಾಲ ತಾಂತ್ರಿಕ ವಿದ್ಯಾಲಯ(MIT) ಪ್ರಾಧ್ಯಾಪಕರಿಗೆ 93.15ಲಕ್ಷ ರೂ. ಕೇಂದ್ರ ಸರಕಾರದ ಅನುದಾನ ನೀಡಲಾಗುತ್ತಿದೆ.

Advertisement

ಮಣಿಪಾಲ ತಾಂತ್ರಿಕ ವಿದ್ಯಾಲಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಹವಾಮಾನ ಬದಲಾವಣೆ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ಅನೀಶ್ ಕುಮಾರ್ ವಾರಿಯರ್‌ ಮುಂದಾಳುತ್ವದಲ್ಲಿ, ಪ್ರಾಧ್ಯಾಪಕ ಡಾ. ಕೆ. ಬಾಲಕೃಷ್ಣರ ಸಹ ಮುಂದಾಳತ್ವದಲ್ಲಿ ಉಡುಪಿ ಜಿಲ್ಲಾ ಕರಾವಳಿಯ ಮೀನುಗಳ ಸಿಗುವಿಕೆಯ ಪ್ರಮಾಣದ ಅಧ್ಯಯನ ನಡೆಸಲು ಕೇಂದ್ರ ಸರಕಾರದ ಭೂವಿಜ್ಞಾನ ಸಚಿವಾಲಯ ಮತ್ತು ಹೈದರಾಬಾದ್ ನ ಭಾರತ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ (INCOIS) 93.15ಲಕ್ಷ ರೂ. ಅನುದಾನ ನೀಡುತ್ತಿದೆ. ಈ ಸಂಶೋಧನೆಯನ್ನು ಮೂರು ವರ್ಷಗಳ ಕಾಲ ಕೈಗೊಳ್ಳಲಾಗುತ್ತದೆ.

ಸಂಶೋಧನೆಯು ಸಾಗರದಲ್ಲಿ ಆಗುತ್ತಿರುವ ಸೂಕ್ಷ್ಮ ಭೂ ಜೈವಿಕ ಬದಲಾವಣೆಗಳನ್ನು ಗಮನಿಸುವುದು, ಅದರಿಂದ ಮೀನಿನ ಇಳುವರಿಯಲ್ಲಾಗುವ ಪ್ರಮಾಣಗಳನ್ನು ಅಳೆಯುವುದಾಗಿದೆ. ಇತ್ತೀಚೆಗಿನ ಹವಾಮಾನ ಬದಲಾವಣೆಗಳು ಹಾಗೂ ಮೀನುಗಳ ಇಳುವರಿಯ ಮೇಲೆ ಆಗುವ ಅದರ ಪರಿಣಾಮ, ಸಾಗರ ಮಾಲಿನ್ಯ ಮತ್ತು ಅದನ್ನು ತಡೆಗಟ್ಟುವಿಕೆಯ ಬಗ್ಗೆಯೂ ಅಧ್ಯಯನ ಮಾಡಲಾಗುತ್ತದೆ.

ಈ ಸಂಶೋಧನೆಯನ್ನು ಗೋವಾದಲ್ಲಿರುವ ರಾಷ್ಟ್ರೀಯ ಸಮುದ್ರ ವಿಜ್ಞಾನ ಸಂಸ್ಥೆ (NIO) ಯ ವಿಜ್ಞಾನಿಗಳಾದ ಡಾ. ದಾಮೋದರ ಶೆಣೈ, ಡಾ. ಸಿಬಿ ಕುರಿಯನ್ ಹಾಗೂ ಡಾ. ಮಂದಾರ್ ನಾನಜ್ಕರ್ ಸಹಯೋಗದಲ್ಲಿ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next