ಪಣಜಿ: ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಅಪರಾಧಗಳಿಗೆ ಹೊರ ರಾಜ್ಯಗಳ ಕಾರ್ಮಿಕರೇ ಕಾರಣ ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಟೀಕಿಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ಹೆಚ್ಚಿನ ಅಪರಾಧಗಳು ಹೊರರಾಜ್ಯದಿಂದ ಬಂದ ದುಡಿಯುವ ವರ್ಗದ ಜನರಿಂದ ನಡೆದಿವೆ ಎಂದು ಮುಖ್ಯಮಂತ್ರಿ ಹೇಳಿದರು.
ಗೋವಾದಲ್ಲಿ ಶೇ. 90 ರಷ್ಟು ಅಪರಾಧಗಳು ಬಿಹಾರ ಮತ್ತು ಉತ್ತರ ಪ್ರದೇಶದ ಮೂಲದ ಉದ್ಯೋಗಿಗಳಿಂದ ಎಸಗಲಾತ್ತಿವೆ. ಅಂತರಾಷ್ಟ್ರೀಯ ಕಾರ್ಮಿಕರ ದಿನದಂದು ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ.
ಇದು ಬಿಹಾರ, ಉತ್ತರ ಪ್ರದೇಶ ಮತ್ತು ದೇಶದ ಇತರ ರಾಜ್ಯಗಳನ್ನು ಒಳಗೊಂಡಿದೆ. ಇಂತಹ ಅಪರಾಧಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲೇಬರ್ ಕಾರ್ಡ್ ಯೋಜನೆ ಜಾರಿಗೆ ತಂದಿದೆ ಎಂದರು.
ಲೇಬರ್ ಕಾರ್ಡ್ ಗಾಗಿ ಕಾರ್ಮಿಕರು ನೋಂದಾಯಿಸುವುದು ಮುಖ್ಯವಾಗಿದೆ. ಇದರಿಂದ ಗೋವಾಕ್ಕೆ ಬರುವ ಪ್ರತಿಯೊಬ್ಬ ಹೊರ ರಾಜ್ಯಗಳ ಕಾರ್ಮಿಕರನ್ನು ಗುರುತಿಸುವುದು ಸುಲಭವಾಗುತ್ತದೆ ಎಂದರು.
ಗುತ್ತಿಗೆದಾರರು ಎಲ್ಲ ಕಾರ್ಮಿಕರು ಕಾರ್ಮಿಕ ಕಾರ್ಡ್‍ಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಅಂತಹ ಕಾರ್ಮಿಕರು ಅಪರಾಧ ಎಸಗುತ್ತಿದ್ದರೆ, ಅವರನ್ನು ಪತ್ತೆಹಚ್ಚಲು ಪೊಲೀಸರಿಗೆ ಸುಲಭವಾಗಲಿದೆ ಎಂದು ಹೇಳಿದರು.