Advertisement

ಭೀಕರ ಅಪಘಾತ, ಕಾರು, ಲಾರಿ ಡಿಕ್ಕಿ; ಒಂಬತ್ತು ವಿದ್ಯಾರ್ಥಿಗಳು ಬಲಿ

09:22 AM Jul 21, 2019 | Nagendra Trasi |

ಪುಣೆ: ಕಾರು ಮತ್ತು ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ಪುಣೆ-ಸೋಲಾಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ವಿದ್ಯಾರ್ಥಿಗಳು ರಾಯ್ ಗಢ್ ನಿಂದ ಯಾವಟ್ ಗೆ ವಾಪಸ್ ಆಗುತ್ತಿದ್ದ ವೇಳೆ ನಸುಕಿನ ವೇಳೆ ಸೋಲಾಪುರ ಬಳಿ ಕಾರು ಲಾರಿಗೆ ಡಿಕ್ಕಿ ಹೊಡೆದಿರುವುದಾಗಿ ಲೋನಿ ಕಾಲ್ಬೋರ್ ಪೊಲೀಸ್ ಠಾಣಾಧಿಕಾರಿ ವಿವರಿಸಿದ್ದಾರೆ.

19ರಿಂದ 23 ವರ್ಷದ ವಿದ್ಯಾರ್ಥಿಗಳು ಕಾರಿನಲ್ಲಿದ್ದು, ಎಲ್ಲರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಮೃತರನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next