ಉಗಾಂಡಾ: ಭಾನುವಾರ ಉಗಾಂಡಾದ ಶಾಪಿಂಗ್ ಮಾಲ್ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವ ಘಟನೆ ಉಗಾಂಡಾದ ಕಂಪಾಲಾದ ಫ್ರೀಡಂ ಸಿಟಿ ಮಾಲ್‌ನಲ್ಲಿ ಸಂಭವಿಸಿದೆ.
ಫ್ರೀಡಂ ಸಿಟಿ ಮಾಲ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನ ಮಾಲ್ ನ ಹೊರಗಡೆ ಪಟಾಕಿ ಪ್ರದರ್ಶನವನ್ನು ವೀಕ್ಷಿಸಲು ಒಂದೇ ಸಮನೆ ಧಾವಿಸಿದ ಪರಿಣಾಮ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸದೆ ಎನ್ನಲಾಗಿದೆ ಈ ವೇಳೆ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದು ಇನ್ನೂ ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪಟಾಕಿ ಪ್ರದರ್ಶನ ನಡೆಯುವ ವೇಳೆ ಜನ ಗುಂಪು ಗುಂಪಾಗಿ ದಾವಿಸಿದರಿಂದ ಅವಘಡ ಸಂಭವಿಸಿದೆ ಎಂದು ಕಂಪಾಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ಕುರಿತು ಉಗಾಂಡಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
“ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಟಿ ಶವಾಗಾರ ಮುಲಾಗೋಗೆ ವರ್ಗಾಯಿಸಲಾಗಿದೆ ಉಗಾಂಡಾ ಪೊಲೀಸ್ ಫೋರ್ಸ್ ಟ್ವೀಟ್ ಮಾಡಿದೆ.