Advertisement

ಗಂಗಾವತಿಯಲ್ಲಿ 8 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ : ಆಹ್ವಾನ ಪತ್ರಿಕೆ ಬಿಡುಗಡೆ

07:26 PM Mar 03, 2023 | Team Udayavani |

ಗಂಗಾವತಿ: ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಯನ್ನು ನಗರದ ಶ್ರೀಚನ್ನಬಸವಸ್ವಾಮಿಮಠದಲ್ಲಿ ಶಾಸಕ ಪರಣ್ಣ ಮುನವಳ್ಳಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮೆಲ್ಲರ ಮನೆಯ ಹಬ್ಬವಾಗಿದೆ. ಎರಡು ದಿನಗಳ ಸಾಹಿತ್ಯ ನುಡಿ ಜಾತ್ರೆಯಲ್ಲಿ ನೆಲ, ಜಲ, ಭಾಷೆ ಹಾಗೂ ಜನರ ಬದುಕಿನ ಚಿಂತನೆ ನಡೆಯಲಿದ್ದು ಭತ್ತದ ಕಣಜ ಗಂಗಾವತಿಯ ಸರ್ವತೋಮುಖ ಪ್ರಗತಿ ಹಾಗೂ ಇಲ್ಲಿಯ ಪ್ರವಾಸೋದ್ಯಮವನ್ನು ಬೆಳೆಸುವ ಗೋಷ್ಠಿಗಳು ಕವಿಗಳ ಕವನ ವಾಚನ ಹೀಗೆ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಕರು ಆಯೋಜಿಸಿದ್ದು ಸರ್ವರೂ ಆಗಮಿಸಿ ನುಡಿ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

Advertisement

ಕಸಾಪ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಅಂಗಡಿ ಮಾತನಾಡಿ, ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಸಾಹಿತ್ಯಾಸಕ್ತರಿಗೆ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ ಸ್ಥಾನಪಡೆದ ಟಿವಿ ಶೋಗಳ ಮೂಲಕ ಕನ್ನಡಿಗರ ಗಮನ ಸೆಳೆದ ಮಹನ್ಯ ಗುರುಪಾಟೀಲ್ ಎಂಬ ಪುಟ್ಟಪೋರಿ ನಡೆಸಿ ಕೊಡುವ ರಸಮಂಜರಿ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಒಟ್ಟು ಐದು ಜನ ಕಲಾವಿದರು ರಸಮಂಜರಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ಅಂಗಡಿ ತಿಳಿಸಿದ್ದಾರೆ.

ಎರಡು ದಿನ 12 ವೈವಿಧ್ಯಮಯ ಕಾರ್ಯಕ್ರಮ:

ಸಾಹಿತ್ಯ ಸಮ್ಮೇಳನದಲ್ಲಿ ಎರಡು ದಿನ ಹನ್ನೆರಡು ವೈವಿಧ್ಯಮ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಮ್ಮೇಳನದ ಮೊದಲ ದಿನ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಮಾಡಲಾಗುವುದು. ಸಮ್ಮೇಳನ ವೇದಿಕೆ ಉದ್ಘಾಟನೆ ನೆರವೇರಲಿದೆ. ಶಿಗ್ಗವಿಯ ಗೋಟಗೋಡಿಯ ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬಳಿಕ ಎಂಟು ಗೋಷ್ಠಿಗಳು ಜರುಗಲಿವೆ. ಒಂದು ಬಹಿರಂಗ ಅಧಿವೇಶನವಿದೆ.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಯುವಕರಿಗೆ ಮಾದರಿಯಾದ ಗಂಗಾವತಿ ತಾಲ್ಲೂಕಿನ ಪ್ರತಿಭೆಗಳನ್ನು ಗುರುತಿಸಿ ಸಾಧಕರಿಗೆ ಸನ್ಮಾನಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ರಾಘವೇಂದ್ರಶೆಟ್ಟಿ, ಕಸಾಪದ ಪದಾಧಿಕಾರಿಗಳಾದ ಶ್ರೀನಿವಾಸ ಅಂಗಡಿ, ರುದ್ರೇಶ ಎಂ, ಪಂಪಣ್ಣ ನಾಯಕ್, ಅಕ್ಕಿ ಚಂದ್ರಶೇಖರ, ಪ್ರಮುಖರಾದ ನರಸಿಂಗರಾವ್ ಕುಲಕರ್ಣಿ, ಕಾನಾಥ ಚಿತ್ರಗಾರ, ಟಿ.ಆರ್. ರಾಯಭಾಗಿ, ಶರಭೋಜಿರಾವ್ ಗಾಯಾಕ್ವಾಡ್, ಎಚ್.ಬಸಣ್ಣ ರಾಘವೇಂದ್ರ ತೂನಾ ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next