Advertisement

Art of Living ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ 87 ದೇಶಗಳು ಭಾಗಿ

11:57 AM May 15, 2024 | Team Udayavani |

ಬೆಂಗಳೂರು: 87 ದೇಶಗಳ ಲಕ್ಷಾಂತರ ಜನರು ಉತ್ತಮ ಮಾನಸಿಕ ಆರೋಗ್ಯ ಮತ್ತು ಸಂತೋಷದ ಪಯಣವನ್ನು ಆರಂಭಿಸಲು ಆರ್ಟ್ ಆಫ್ ಲಿವಿಂಗ್ ನಿಂದ ಆಯೋಜಿಸಲ್ಪಟ್ಟಿದ್ದ ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀ ರವಿಶಂಕರರ 68ನೆಯ ಹುಟ್ಟು ಹಬ್ಬದ ಸಂಭ್ರಮವನ್ನೂ ಈ ಸಂದರ್ಭದಲ್ಲಿ ಆಚರಿಸಲಾಯಿತು.

Advertisement

ಭಾರತದಲ್ಲಿ ಲಕ್ಷಾಂತರ ಭಕ್ತರು ಈ ವಿಶೇಷ ದಿನವನ್ನು ಸೇವೆಯಲ್ಲಿ, ಸಂಗೀತದಲ್ಲಿ ಮತ್ತು ತಮ್ಮ ಸಮುದಾಯಗಳಲ್ಲಿ ಸಂತೋಷವನ್ನು ಹಂಚುವುದರಲ್ಲಿ ಕಳೆದರು. ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ರವಿಶಂಕರ ಗುರೂಜಿ ” ಜ್ಞಾನದಲ್ಲಿ ಮುಳುಗಿದ್ದಾಗ ಪ್ರತಿದಿನವೂ ಸಂತೋಷಮಯವಾದ ದಿನವೇ. ನಮ್ಮ ಜೀವನವು ಸೇವೆ, ಸತ್ಸಂಗ, ಸಾಧನಕ್ಕೆ ಮುಡುಪಾಗಿದ್ದಾಗ ಪ್ರತಿ ದಿನವೂ ಒಂದು ಸಂಭ್ರಮವೇ ಎಂದು ಕಂಡುಕೊಳ್ಳುತ್ತೇವೆ. ಎಲ್ಲರಿಗೂ ಸಂತೋಷವನ್ನು ತನ್ನಿ.  ನಾನು ಇಲ್ಲಿ ಎಲ್ಲರಿಗೂ ಸಂತೋಷವನ್ನು ತರಲು ಇಲ್ಲಿದ್ದೇನೆ ಎಂಬ ಒಂದು ಆಲೋಚನೆಯೇ ಸಾಕು, ನಿಮ್ಮ ದಾರಿಯಲ್ಲಿರುವ ಅಡಚಣೆಗಳು ದೂರವಾಗಲು ಮತ್ತು ನಿಮಗೆ ಹೇಗೆ ಬೇಕೋ ಹಾಗೆ ವಿಷಯ ನಡೆಯಲು” ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸಂತೋಷವಾಗಿರುವ, ಮನಸ್ಸು ತಿಳಿಯಾಗಿ, ಸ್ಪಷ್ಟವಾಗಿರುವ, ನೋವು ಮತ್ತು ಒತ್ತಡ ರಹಿತರಾಗಿರುವರೆಂದು, ಕೇವಲ ನಾಲ್ಕು ದಿವಸಗಳ ಪ್ರಾಣಾಯಾಮ, ಯೋಗ ಮತ್ತು ಸುದರ್ಶನ ಕ್ರಿಯೆಯ ಅಭ್ಯಾಸದಿಂದ ಅನುಭವಿಸಿದ್ದರಲ್ಲದೆ, ಕೆಲವು ಆಳವಾದ ಒಳನೋಟವನ್ನೂ ಪಡೆದುಕೊಂಡರೆಂದರು.

ಆರ್ಟ್ ಆಫ್ ಲಿವಿಂಗ್ ನ ಶಾಲೆಗಳಿಂದ ಗಿಡಗಳನ್ನು ನೆಡಲಾಯಿತು. ರಕ್ತದಾನದ ಶಿಬಿರಗಳನ್ನು, ವೈದ್ಯಕೀಯ ಶಿಬಿರಗಳನ್ನು ಮತ್ತು ಆಯುಷ್ಯ ಹೋಮಗಳನ್ನು ಸಾವಿರಾರು ಆರ್ಟ್ ಆಫ್ ಲಿವಿಂಗ್ ನ ಕೇಂದ್ರ ಗಳಲ್ಲಿ ನಡೆಸಲಾಯಾತು. ಮಹಾರಾಷ್ಟ್ರದ ಸತಾರ ಜಿಲ್ಲೆಯ 68 ಹಳ್ಳಿಗಳಲ್ಲಿ ಆರ್ಟ್ ಆಫ್ ಲಿವಿಂಗ್ ಹಾಗೂ ಸಹ್ಯಾದ್ರಿ ದೇವ್ ರಾಯ್ ( ಪ್ರಸಿದ್ಧ ನಟರಾದ ಸಯ್ಯಾಜಿ ಶಿಂಧೆಯವರ ಯೋಜನೆ) ಜಂಟಿಯಾಗಿ ಅಪಾರ ಸಂಖ್ಯೆಯಲ್ಲಿ ಗಿಡಗಳನ್ನು ನೆಡಲಾಯಿತು.ರಾಯ್ಪುರ್ ನ ಹೊಸ ಧ್ಯಾನದ ಕೇಂದ್ರವಾದ ಗ್ಯಾನ್ ಕ್ಷೇತ್ರವನ್ನು ಗುರೂಜಿ ವರ್ಚುಯ ಲ್ ಆಗಿ ಉದ್ಘಾಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next