Advertisement

ಅಮೆರಿಕಾದಲ್ಲಿ ಕೋವಿಡ್-19 ರುದ್ರ ನರ್ತನ: ಮಂಗಳವಾರ ಒಂದೇ ದಿನ 865 ಬಲಿ

09:17 AM Apr 02, 2020 | Mithun PG |

ವಾಷಿಂಗ್ಟನ್: ಅಮೇರಿಕಾದಲ್ಲಿ ಕೋವಿಡ್-19 ವೈರಸ್ ತನ್ನ ಪ್ರತಾಪವನ್ನು ಮುಂದುವರೆಸಿದ್ದು ಮಂಗಳವಾರ ಒಂದೇ ದಿನ 865 ಜನರು ಬಲಿಯಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ದಾಖಲಾದ ಅತಿದೊಡ್ಡ  ಸಾವಿನ ಪ್ರಕರಣ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ

Advertisement

ಅಮೆರಿಕದಾದಲ್ಲಿ ಸೋಮವಾರ ಸಂಜೆಯ ವೇಳೆಗೆ 3.008 ಜನರು ಮೃತರಾಗಿದ್ದರು..ಆದರೆ ಮಂಗಳವಾರ ಸಂಜೆ ವೇಳೆಗೆ ಇದರ ಪ್ರಮಾಣ 3,873 ಕ್ಕೆ ತಲುಪಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ದೇಶದಲ್ಲಿ ಒಟ್ಟಾರೆಯಾಗಿ 1,88.172 ಸೋಂಕಿತರಿದ್ದು ಚೀನಾ,ಇಟಲಿ ಸ್ಪೇನ್ ಗಿಂತ ಅತೀ ಹೆಚ್ಚು ಭಾಧಿತವಾದ ದೇಶ ಎಂದೇ ಪರಿಗಣಿಸಲ್ಪಟ್ಟಿದೆ.

ಜಗತ್ತಿನಾದ್ಯಂತ ಕೋವಿಡ್-19 ಮಾಹಾಮಾರಿಗೆ 42, 151 ಜನರು ಬಲಿಯಾಗಿದ್ದು 8,58, 669 ಕ್ಕಿಂತ ಹೆಚ್ಚು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next