Advertisement

ಹೆಚ್ಚಿನ ರೈತ ಸಂಘಟನೆಗಳಿಂದ ಕೃಷಿ ಕಾಯ್ದೆಗಳಿಗೆ ಬೆಂಬಲ

09:22 PM Mar 21, 2022 | Team Udayavani |

ನವದೆಹಲಿ: “ದೇಶದ 3.3 ಕೋಟಿ ರೈತರನ್ನು ಒಳಗೊಂಡ 61 ಸಂಘಟನೆಗಳು ಕೇಂದ್ರದ ಮೂರೂ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದವು.’ ಹೀಗೆಂದು ಹೇಳಿರುವುದು ವಿವಾದಾತ್ಮಕ ಕೃಷಿ ಕಾಯ್ದೆಗಳ ಪರಿಶೀಲನೆಗಾಗಿ ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಸಮಿತಿ.

Advertisement

ನಾವು ಸಂಪರ್ಕಿಸಿ ಸಮಾಲೋಚನೆ ನಡೆಸಿರುವ ರೈತರ ಪೈಕಿ ಬಹುತೇಕ ರೈತ ಸಂಘಟನೆಗಳು ಕೇಂದ್ರದ ಕಾನೂನುಗಳ ಪರವೇ ಮಾತನಾಡಿವೆ ಎಂದು ಈ ಸಮಿತಿಯ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಕಾಯ್ದೆಗೆ ದೇಶಾದ್ಯಂತದ ಅನ್ನದಾತರಿಂದ ಭಾರೀ ವಿರೋಧ ವ್ಯಕ್ತವಾಗಿ, ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದ ಬಳಿಕ 2021ರ ನವೆಂಬರ್‌ನಲ್ಲಿ ಮೂರೂ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದು ಪ್ರಧಾನಿ ಮೋದಿ ಘೋಷಿಸಿದ್ದರು.

ಸುಪ್ರೀಂ ಕೋರ್ಟ್‌ಗೂ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಕಾಯ್ದೆಗಳ ಪರಿಶೀಲನೆಗಾಗಿ ನ್ಯಾಯಾಲಯವು ಮೂವರು ಸದಸ್ಯರ ಸಮಿತಿಯನ್ನು ರಚಿಸಿತ್ತು.

ಸೋಮವಾರ ಈ ವರದಿ ಬಿಡುಗಡೆ ಮಾಡಿ ಮಾತನಾಡಿರುವ ಈ ಸಮಿತಿಯ ಸದಸ್ಯರಾಗಿರುವ ಅನಿಲ್‌ ಘನ್ವತ್‌, “ಪ್ರತಿಭಟನಾನಿರತರು ಸೇರಿದಂತೆ 266 ರೈತ ಸಂಘಟನೆಗಳನ್ನು ಭೇಟಿಯಾಗಿ ನಾವು ಅಭಿಪ್ರಾಯ ಸಂಗ್ರಹಿಸಿದ್ದೆವು.

Advertisement

ಇದನ್ನೂ ಓದಿ:ಮಾ.29, 30ಕ್ಕೆ ವಿಧಾನಸಭೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಚರ್ಚೆ

ಜತೆಗೆ, ಅದಕ್ಕೆಂದೇ ರಚಿಸಲಾಗಿದ್ದ ಪೋರ್ಟಲ್‌ಗೆ 19,027 ಪ್ರತಿಕ್ರಿಯೆಗಳು, 1520 ಇಮೇಲ್‌ಗ‌ಳು ಬಂದಿದ್ದವು. 3.83 ಕೋಟಿ ರೈತರನ್ನು ಪ್ರತಿನಿಧಿಸುವ 73 ಸಂಘಟನೆಗಳನ್ನು ನಾವು ನೇರವಾಗಿ ಅಥವಾ ವಿಡಿಯೋ ಲಿಂಕ್‌ ಮೂಲಕ ಸಂಪರ್ಕಿಸಿದ್ದೆವು. 73ರ ಪೈಕಿ 61 ಸಂಘಟನೆಗಳು ಕೃಷಿ ಕಾಯ್ದೆಗಳನ್ನು ಬೆಂಬಲಿಸಿದವು. 51 ಲಕ್ಷ ರೈತರನ್ನು ಒಳಗೊಂಡ 4 ಸಂಘಟನೆಗಳು ವಿರೋಧಿಸಿದವು. 3.6 ಲಕ್ಷ ರೈತರನ್ನು ಒಳಗೊಂಡ 7 ಸಂಘಟನೆಗಳು ಕಾಯ್ದೆಗೆ ತಿದ್ದುಪಡಿ ಬೇಕೆಂದು ಕೇಳಿಕೊಂಡವು’ ಎಂದಿದ್ದಾರೆ.

ಆದರೆ, ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಇದೇ ಸಮಿತಿಯ ಇನ್ನಿಬ್ಬರು ಸದಸ್ಯರಾದ ಕೃಷಿ ಅರ್ಥಶಾಸ್ತ್ರಜ್ಞ, ಕೃಷಿ ವೆಚ್ಚ ಮತ್ತು ದರಗಳ ಆಯೋಗದ ಮಾಜಿ ಮುಖ್ಯಸ್ಥ ಅಶೋಕ್‌ ಗುಲಾಟಿ ಹಾಗೂ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ದಕ್ಷಿಣ ಏಷ್ಯಾ ನಿರ್ದೇಶಕ ಹಾಗೂ ಕೃಷಿ ಅರ್ಥಶಾಸ್ತ್ರಜ್ಞರಾದ ಡಾ. ಪ್ರಮೋದ್‌ ಕುಮಾರ್‌ ಜೋಷಿ ಗೈರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next