ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸಂರಕ್ಷಣೆ ಮಾಡುವ ಜೊತೆಗೆ ಅವರಿಗೆ ಸಕಲ ಸೌಲಭ್ಯ ಕಲ್ಪಿಸಲು ವಿಶೇಷ ಆದ್ಯತೆ ನೀಡಲಾಗಿದೆ. ಕೋವಿಡ್ ಸಂಕಷ್ಟದ ಅವಧಿಯಲ್ಲಿ ಜಿಲ್ಲೆಯಲ್ಲಿ 86 ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲಾಡಳಿತ ಭವನದ ಮುಂದೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಮಮತೆಯತೊಟ್ಟಿಲು ಮತ್ತು ಬಾಲರಥಕ್ಕೆ ಚಾಲನೆನೀಡಿ ಮಾತನಾಡಿದ ಅವರು, ಜಿಲ್ಲಾ ಮಕ್ಕಳ ಘಟಕದ ಯೋಜನೆ ಮತ್ತು ಮಕ್ಕಳ ರಕ್ಷಣೆಗಾಗಿ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲೆಯಾದ್ಯಂತಬಾಲರಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಾಗೃತಿ ಮೂಡಿಸಲು ಕ್ರಮ: ಮಕ್ಕಳಿಗೆ ಅಗತ್ಯ ರಕ್ಷಣೆ, ಪೋಷಣೆ ಹಾಗೂಪುನರ್ವಸತಿ ಕಲ್ಪಿಸುವುದು ಅತ್ಯವಶ್ಯಕವಾಗಿದೆ. ಯಾವುದೇ ಒಂದು ಮಗು ತನ್ನ ಹಕ್ಕುಗಳಿಂದವಂಚಿತರಾಗದೆ, ಶೋಷಣೆಗೆ ಒಳಗಾಗಬಾರದು. ಈ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಕಾನೂನು ಕಾಯ್ದೆಗಳನ್ನು ಜಾರಿಗೆ ತಂದು ಮಕ್ಕಳ ರಕ್ಷಣೆಗಾಗಿ ನಿಂತಿದೆ. ಆದರೆ, ಈ ಎಲ್ಲಾ ಕಾನೂನುಗಳ ಮಧ್ಯೆಯೂ ಜಿಲ್ಲೆಯ ಗಡಿಭಾಗದಲ್ಲಿ ಬಾಲ್ಯ ವಿವಾಹ ನಡೆಸಲು ಯತ್ನಿಸುತ್ತಿರುವುದು ವಿಷಾದನೀಯ. ಕೋವಿಡ್ ಸಂದರ್ಭದಲ್ಲಿ ಸುಮಾರು 86 ಬಾಲ್ಯ ವಿವಾಹ ತಡೆಯಲಾಗಿದೆ. ಎಲ್ಲಾ ಶಾಲಾ ಕಾಲೇಜು ಗಳಲ್ಲಿ, ಪೋಷಕರಲ್ಲಿ ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅರಿವು ಮೂಡಿಸುವುದು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯ ಆಯ್ದ 37 ಆದರ್ಶ ಗ್ರಾಮಗಳಿಗೆಹಾಗೂ 157 ಗ್ರಾಪಂಗಳಿಗೆ ಭೇಟಿ ನೀಡಿಗ್ರಾಮ ಮಟ್ಟದ ಮಕ್ಕಳ ರಕ್ಷಣಾ ಸಮಿತಿಗಳನ್ನು ಬಲವರ್ಧನೆ ಮಾಡುವುದು ಪ್ರತಿಗ್ರಾಪಂಗಳಲ್ಲಿ ಸಂಕಷ್ಟಕ್ಕೊಳಪಟ್ಟ ಮಕ್ಕಳನ್ನುಹಾಗೂ ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ನಡೆಯುವ ಸ್ಥಳಗಳನ್ನು ಪತ್ತೆಹಚ್ಚುವುದು. ನಾಗರಿಕರಲ್ಲಿ ಮಕ್ಕಳ ರಕ್ಷಣೆಗೆ ಅರಿವು ಮೂಡಿಸುವುದು, ಜಿಲ್ಲಾದ್ಯಂತ ಮಕ್ಕಳ ರಕ್ಷಣೆಯ ಯೋಜನೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸುವುದು, ಮಕ್ಕಳ ಸಹಾಯವಾಣಿ 1098 ಬಗ್ಗೆ ಹೆಚ್ಚಿನ ಅರಿವುಮೂಡಿಸುವುದು ಈ ಬಾಲರಥ ಕಾರ್ಯ ಕ್ರಮದ ಉದ್ದೇಶವಾಗಿರುತ್ತದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮೊಹ್ಮದ್ ಉಸ್ಮಾನ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕೆಲವರು ಕಸದ ತೊಟ್ಟಿಯಲ್ಲಿ ಎಲ್ಲೆಂದರಲ್ಲಿ ನವಜಾತ ಶಿಶುಗಳನ್ನು ಎಸೆದು ಹೋಗುತ್ತಾರೆ. ಇಂತಹ ಮಕ್ಕಳ ರಕ್ಷಣೆಗಾಗಿ ಮಮತೆಯ ತೊಟ್ಟಿಲುಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಮಮತೆಯ ತೊಟ್ಟಿಲಲ್ಲಿ ಮಗು ಬಿಟ್ಟರೆ ಮಗುವಿನ ಭವಿಷ್ಯ ಹಸನುಗೊಳಿಸ ಬಹುದು. ಜಿಲ್ಲೆಯ ಎರಡು ಶಿಶುಗಳನ್ನುಕೆನಡಾದ ನಾಗರಿಕರು ದತ್ತು ತೆಗೆದುಕೊಂಡಿದ್ದಾರೆ.
–ಆರ್.ಲತಾ, ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆಮಾಡುವ ದೂರು ಬಂದರೇ ತಕ್ಷಣ ಕ್ರಮ ಜರುಗಿಸುತ್ತೇವೆ. ಬಾಲ್ಯ ವಿವಾಹ ತಡೆಗಟ್ಟಲುಕ್ರಮ ಕೈಗೊಂಡಿದ್ದು, ಬಾಲಕಾರ್ಮಿಕರ ಪದ್ಧತಿ ನಿರ್ಮೂಲನೆ ಮಾಡಲುನಾಗರಿಕರು ಸಹಕರಿಸಬೇಕು.
–ಮಿಥುನ್‌ಕುಮಾರ್, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ