ಆನೇಕಲ್: ತಾಲೂಕಿನಲ್ಲಿ ನಡೆದಿದೆ ಎನ್ನಲಾದ 838 ಕೋಟಿ ಮೊತ್ತದ ಬೃಹತ್ ಹಗರಣಗಳ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬೆಂಗಳೂರು ನಗರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್ ಬಿಡುಗಡೆಗೊಳಿಸಿದರು.
ತಾಲೂಕಿನ ಚಂದಾಪುರ ಖಾಸಗಿ ಹೋಟೆಲ್‌ನಲ್ಲಿ ಆಯೋಜನೆ ಮಾಡಿದ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಭ್ರಷ್ಟಾಚಾರದಲ್ಲಿ ತೊಡಗಿ ಅಕ್ರಮ ನಡೆಸಿರುವ ಅಧಿಕಾರಿಗಳು ಹಾಗೂ ಸಂಬಂಧಪಟ್ಟಜನಪ್ರತಿನಿಧಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಈ ಹರಗಣವನ್ನು ಸಿಐಡಿಗೆ ವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾಮಗಾರಿ ಪೂರ್ಣಗೊಳಿಸದೆ ಹಣ: 2014 ಮತ್ತು 2019-20 ಅವಧಿಯಲ್ಲಿ 69 ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ 260 ಕೋಟಿ ಮತ್ತು ವಿವಿಧ ಕಾಮಗಾರಿಗಳಿಗೆ ಆನೇಕಲ್ ಯೋಜನಾ ಪ್ರಾಧಿಕಾರದ 576.60ಕೋಟಿ ಹಣ ಒಟ್ಟು 838 ಕೋಟಿ ಮೊತ್ತದಕಾಮಗಾರಿಗಳಲ್ಲಿ ಅಕ್ರಮ ಎಸಗಲಾಗಿದೆ. ಕಾಮಗಾರಿ ಪೂರ್ಣಗೊಳಿಸದೆ ಶೇ.80ರಷ್ಟು ಹಣವನ್ನು ಗುತ್ತಿಗೆದಾರರು ಪಡೆದುಕೊಂಡಿರುತ್ತಾರೆ.ಕಾಮಗಾರಿ ಮುಗಿದಿದೆ ಎಂದು ಸುಳ್ಳು ದಾಖಲೆಗಳನ್ನುನೀಡಿ ಜನತೆಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ದೃಢೀಕರಣ ಪತ್ರ ಪಡೆದಿಲ್ಲ: ಆಯಾ ಕಾಮಗಾರಿ ಗಳನ್ನು ಪ್ರಾರಂಭಿಸುವ ಮೊದಲಿನ ಚಿತ್ರಗಳು. ಕಾಮಗಾರಿ ಚಾಲ್ತಿ ಇರುವಾಗ ತೆಗೆದ ಚಿತ್ರಗಳು ಮತ್ತು ಕಾಮಗಾರಿ ಪೂರ್ಣಗೊಂಡ ನಂತರ ಚಿತ್ರಗಳನ್ನು ಆರ್‌ಟಿಐ ಕಾಯ್ದೆಯಡಿಯಲ್ಲಿ ಕೇಳಿದರೂ ಸರಿಯಾದ ಮಾಹಿತಿ ನೀಡದೆ ಅಧಿಕಾರಿಗಳು ಕೆಲಸ ಪೂರ್ಣ ಗೊಳಿಸಲಾಗಿದೆ ಎಂದು ನುಣಿಚಿಕೊಳ್ಳುತ್ತಿದ್ದಾರೆ.ಇನ್ನೂ ಯಾವ ಒಂದು ಕಾಮಗಾರಿಗೂ ಸಹ ಗುಣಮಟ್ಟ ನಿಯಂತ್ರಣ ಇಲಾಖೆಯ ದೃಢೀಕರಣ ಪತ್ರಗಳನ್ನೇ ಪಡೆದಿಲ್ಲ. ಹಗರಣದಲ್ಲಿ ಕೆಲ ಅಧಿಕಾರಿಗಳು ಹಾಗೂ ತಾಲೂಕಿನ ಶಾಸಕ ಶಿವಣ್ಣ ಅವರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಿದರು.
ದೂರು ದಾಖಲು: ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಇಲಾಖೆಗಳ ಮೂಲಕ ನಡೆದಿರುವ 838 ಕೋಟಿ ಮೊತ್ತದ ಕಾಮಗಾರಿಗಳಲ್ಲಿ 400 ಕೋಟಿಗೂ ಹೆಚ್ಚು ಮೊತ್ತ ದುರ್ಬಳಕೆಯಾಗಿದೆ.ಹಗರಣಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಸೇರಿದಂತೆ ಬೆಂಗಳೂರು ನಗರ ಜಿಪಂನಲ್ಲಿ ಸಿಇಒಗಳಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಾದ ಬೆಟ್ಟಸ್ವಾಮಿ, ಮಂಜುಶ್ರೀ, ಅರ್ಚನಾ ಹಾಗೂಶ್ರೀನಿವಾಸ್ ನಾಲ್ವರು ಐಎಎಸ್ ಅಧಿಕಾರಿಗಳು ಮತ್ತು10ಕ್ಕೂ ಹೆಚ್ಚು ಇಂಜಿನಿಯರ್‌ಗಳು ಹಾಗೂ ಆನೇಕಲ್‌ಯೋಜನಾ ಪ್ರಾಧಿಕಾರದ ಇಬ್ಬರೂ ಸದಸ್ಯ ಕಾರ್ಯದರ್ಶಿಗಳಾದ ಕೆ.ಎನ್.ನಾರಾಯಣಗೌಡ, ವೆಂಕಟ ದುರ್ಗಾಪ್ರಸಾದ್ ಕುಂಚಾಲ ಹಾಗೂನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಭಾಗದ 4ಮಂದಿ ಕಾರ್ಯಪಾಲಕ ಅಭಿಯಂತರರು, ಎಲ್ಲಗುತ್ತಿಗೆದಾರರ ವಿರುದ್ಧ ಎಸಿಬಿ, ಲೋಕಾಯುಕ್ತ ಮತ್ತು ನಗರದ ಎಸಿಎಂಎಂ ನ್ಯಾಯಾಲಯಗಳಲ್ಲಿ ದೂರು ದಾಖಲಿಸಲಾಗಿದೆ ಎಂದು ಅವರು ವಿವರಿಸಿದರು
ಸುದ್ದಿಗೋಷ್ಠಿಯಲ್ಲಿ ಅತ್ತಿಬೆಲೆ ಹೋಬಳಿ ಮಂಡಲ ಅಧ್ಯಕ್ಷ ಎಸ್.ಆರ್.ಅಶೋಕ್‌ರೆಡ್ಡಿ, ಮುಖಂಡರಾದ ಅತ್ತಿಬೆಲೆ ಬಸವರಾಜು ಹಾಜರಿದ್ದರು.
ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು 5,700 ಪುಟಗಳ ದಾಖಲೆಗಳ ಸಮೇತಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿ ಈ ಎರಡು ಹಗರಣಗಳನ್ನು ಸಿಐಡಿ ತನಿಖೆಗೆ ವಹಿಸುವಂತೆ ಆಗ್ರಹಿಸಲಾಗಿದೆ.
-ಎನ್.ಆರ್.ರಮೇಶ್, ಬೆಂಗಳೂರು ನಗರ ಬಿಜೆಪಿ ಜಿಲ್ಲಾಧ್ಯಕ್ಷ