Advertisement

ರಾಜ್ಯದ 83 ತಾಲ್ಲೂಕುಗಳು ಪ್ರವಾಹ ಪೀಡಿತ: ಕಂದಾಯ ಸಚಿವ ಆರ್ ಅಶೋಕ

07:01 PM Aug 17, 2021 | Team Udayavani |

ಬೆಂಗಳೂರು: ಕರ್ನಾಟಕದಲ್ಲಿನ 83 ತಾಲ್ಲೂಕುಗಳು ಅಧಿಕೃತವಾಗಿ ಪ್ರವಾಹ ಪೀಡಿತಗೊಂಡಿವೆ ಎಂದು ಕಂದಾಯ ಸಚಿವ ಆರ್ ಅಶೋಕ ಮಾಹಿತಿ ನೀಡಿದರು.

Advertisement

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಮೊದಲು ನಾವು 61 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿದ್ದೆವು. ಆದರೆ, ಇತ್ತೀಚಿನ ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ನಂತರ, ಬೆಳಗಾವಿ, ಚಿಕ್ಕಮಗಳೂರು, ಹುಬ್ಬಳ್ಳಿ ನಗರ, ಕಡೂರು, ದಾವಣಗೆರೆ, ದಾಂಡೇಲಿ, ಆಲೂರು, ಲಕ್ಷ್ಮೇಶ್ವರ, ತರೀಕೆರೆ, ಮುಂಡಗೋಡು, ಸೂಪಾ, ಹುಬ್ಬಳ್ಳಿ, ಭದ್ರಾವತಿ, ಚನ್ನಗಿರಿ, ಅಣ್ಣಿಗೇರಿ, ಬಬಲೇಶ್ವರ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ, ಹರಪನಹಳ್ಳಿ, ಹೊಸನಗರ ಮತ್ತು ಮುದಿಗೆರೆ ಸೇರಿದಂತೆ 22 ತಾಲ್ಲೂಕುಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿವೆ. ಹೀಗಾಗಿ ರಾಜ್ಯದಲ್ಲಿ 83 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಪಟ್ಟಿ ಮಾಡಲಾಗಿದೆ” ಎಂದು ಹೇಳಿದರು.

ಮಿಂಚು ಮತ್ತು ಚಂಡಮಾರುತ ಕುರಿತು ಮುನ್ನೆಚ್ಚರಿಕೆ

ಸಚಿವ ಅಶೋಕ ಅವರು ಮಾತನಾಡುತ್ತಾ “ಸಂಭವನೀಯ  ಮಿಂಚಿನ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರತಿ ವರ್ಷ ಮಿಂಚಿನ  ದಾಳಿಗೆ ತುತ್ತಾಗಿ ಅನೇಕ ಜನರು ಸಾವನ್ನಪ್ಪುತ್ತಾರೆ. ಆದ್ದರಿಂದ, ನಾವು ಆಯ್ದ ಗ್ರಾಮಗಳಲ್ಲಿ ಮಿಂಚು ಸಂಭವಿಸುವ ಕುರಿತಂತೆ ಮುಂಜಾಗ್ರತೆ‌ ನೀಡುವ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ನೆರವಿನಿಂದ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ. ಈ ಎಚ್ಚರಿಕೆಯ ವ್ಯವಸ್ಥೆಗಳನ್ನು ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸಲಾಗುವುದು ಮತ್ತು ಬೆಂಗಳೂರಿನ ಹವಾಮಾನ ಕಚೇರಿಯೊಂದಿಗೆ ಇದನ್ನು ಸಂಪರ್ಕಿಸಲಾಗುವುದು.

ಈ ಯೋಜನೆಯ ಕೆಲಸಗಳು ಈಗಾಗಲೇ ನಡೆಯುತ್ತಿವೆ ಮತ್ತು ಶೀಘ್ರವೇ ಕಾರ್ಯಗತಗೊಳ್ಳಲಿದೆ. ನಾವು ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಬಗ್ಹೆಯೂ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಿದ್ದೇವೆ. ಆರು ಕಿಲೋಮೀಟರ್‌ಗಳವರೆಗೆ ಕೇಳಬಹುದಾದ ಸೈರನ್‌ಗಳನ್ನು ಸ್ಥಾಪಿಸಲಾಗುತ್ತದೆ. ಕರಾವಳಿ ಪ್ರದೇಶದಲ್ಲಿ 40 ಸ್ಥಳಗಳಲ್ಲಿ ಪ್ರಾರಂಭಿಸಲು ಯೋಜಿಸಲಟಗಿದ್ದು, ಶೀಘ್ರದಲ್ಲೇ ಇದನ್ನು 60 ಸ್ಥಳಗಳಿಗೆ ವಿಸ್ತರಿಸುವ‌ ಚಿಂತನೆಯಿದೆ. ಪ್ರತಿ ಕೇಂದ್ರವನ್ನು ಸ್ಥಾಪಿಸಲು 10 ರಿಂದ 12 ಕೋಟಿ ವೆಚ್ಚವಾಗುತ್ತಿದ್ದು ಕೇಂದ್ರ ಸರ್ಕಾರದ ನಿಧಿಯೊಂದಿಗೆ ಇದನ್ನು ಕಾರ್ಯಗತಗೊಳಿಸಲಾಗುವುದು. ಇದು ವಿಶೇಷವಾಗಿ ಮೀನುಗಾರರು ಮತ್ತು ಕರಾವಳಿ ಪ್ರದೇಶಗಳಲ್ಲಿ ಇರುವವರನ್ನ ಎಚ್ಚರಿಸಿ, ಸಂಭವಿಸಬಹುದಾದ ಪ್ರಾಣಹಾನಿಯನ್ನು ತಪ್ಪಿಸುತ್ತದೆ” ಎಂದು ಹೇಳಿದರು.

Advertisement

 ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಕ್ರಮ: ಆರ್ ಅಶೋಕ್

“ಬೆಂಗಳೂರಿನಲ್ಲಿ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಗತ್ಯವಿರುವ ಕಡೆಗಳಲ್ಲಿ  ಚರಂಡಿಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರಿಂದ ಬೆಂಗಳೂರಿನ ಬೀದಿಗಳಲ್ಲಿ ನೀರು ನಿಲ್ಲುವುದನ್ನು ತಡೆಯಬಹುದು. ರಸ್ತೆಗಳಲ್ಲಿ ನೀರು ಹರಿಯುವುದರಿಂದ ಅನೇಕ ರಸ್ತೆಗಳು ಮಳೆ ಬೀಳುವ ಸಮಯದಲ್ಲಿ ಟ್ರಾಫಿಕ್ ಜಾಮ್‌ಗಳಿಗೆ ಸಾಕ್ಷಿಯಾಗುತ್ತವೆ. ಅಂತಹ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲು ನಾವು ನಿರ್ಧರಿಸಿದ್ದೇವೆ. ನಾನು ಇತ್ತೀಚೆಗೆ ಕಮರ್ಷಿಯಲ್ ಸ್ಟ್ರೀಟ್ ಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದೇನೆ. ಅಲ್ಲಿ ಕಾಮಗಾರಿ ಕಳಪೆಯಾಗಿದ್ದು, ಟೈಲ್ಸ್ ಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ಆದೇಶಿಸಿದ್ದೇನೆ. ಎರಡು ತಿಂಗಳಲ್ಲಿ ರಸ್ತೆ ಹೊಸ ರೂಪವನ್ನು ಪಡೆಯುತ್ತದೆ. ನಿಯಮಿತವಾಗಿ ಕೆಲಸಗಳನ್ನು ಪರಿಶೀಲಿಸಲು ಮತ್ತು   ಕಳಪೆ ಗುಣಮಟ್ಟದ ಕೆಲಸಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯಾವುದೇ ಅಧಿಕಾರಿ ನಿರ್ಲಕ್ಷ್ಯ ತೋರಿದರೆ, ತಪ್ಪು ಮಾಡಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ “ಎಂದು ಅಶೋಕ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next