Advertisement

ರಣ್ ವೀರ್@34; “83”ವಿಶ್ವಕಪ್ ಸಿನಿಮಾದ ಫಸ್ಟ್ ಲುಕ್ ನಲ್ಲಿ ರಣ್ ವೀರ್ ಸಿಂಗ್!

11:51 AM Jul 07, 2019 | Team Udayavani |

ಮುಂಬೈ: ಬಾಲಿವುಡ್ ನ ಖ್ಯಾತ ನಟ, ಸೆಲೆಬ್ರಿಟಿ ರಣವೀರ್ ಸಿಂಗ್ ಭವಾನಿ(34) ಹುಟ್ಟುಹಬ್ಬದ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ತನ್ನ ಅಭಿಮಾನಿಗಳಿಗೆ “83” ಹಿಂದಿ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರಧಾರಿಯ  ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

Advertisement

ಇವತ್ತು ನನ್ನ ವಿಶೇಷ ದಿನ ಎಂದು ಟ್ವೀಟರ್ ನಲ್ಲಿ ರಣವೀರ್ ಸಿಂಗ್, ದ ಹರ್ಯಾಣ ಹರಿಕೇನ್ ಕಪಿಲ್ ದೇವ್ ಎಂದು ಟ್ವೀಟ್ ಮಾಡಿದ್ದಾರೆ. 1983ರಲ್ಲಿ ಭಾರತ ಕ್ರಿಕೆಟ್ ತಂಡದ ಕಪ್ತಾನ ಕಪಿಲ್ ದೇವ್ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ಅನ್ನು ಸದೆಬಡಿದು ವಿಶ್ವಕಪ್ ಗೆದ್ದಿತ್ತು.

ಇದೀಗ 1983ರ ವಿಶ್ವಕಪ್ ಗೆದ್ದಿರುವ ರೋಚಕ ಹಣಾಹಣಿಯ ಕಥಾಹಂದರ ಹೊಂದಿರುವ “83” ಸಿನಿಮಾದಲ್ಲಿ ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ನಿಜಕ್ಕೂ ರಣವೀರ್ ಅಥವಾ ಕಪಿಲ್ ದೇವಾ ಎಂಬಷ್ಟರ ಮಟ್ಟಿಗೆ ಫಸ್ಟ್ ಲುಕ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟುಹಾಕಿದೆ.

83 ಸಿನಿಮಾದಲ್ಲಿ ಆರ್ .ಬದ್ರಿ, ಹಾರ್ಡಿ, ಚಿರಾಗ್ ಪಾಟೀಲ್, ಸಾದಿಕ್ ಸಲೀಂ, ಪಂಕಜ್ ತ್ರಿಪಾಠಿ, ಅಮೈ ವಿರ್ ಕ್, ಸಾಹಿಲ್ ಖಟ್ಟರ್ ಸೇರಿದಂತೆ ಹಲವು ನಟರು ಮುಖ್ಯಭೂಮಿಕೆಯಲ್ಲಿದ್ದಾರೆ. ಸದ್ಯ 83 ಸಿನಿಮಾದ ಶೂಟಿಂಗ್ ಲಂಡನ್ ನಲ್ಲಿ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next