Advertisement

ಜ್ಯಾಕ್‌ಮಾಗೆ 8,261 ಕೋಟಿ ದಂಡ

08:27 PM Jul 09, 2023 | Team Udayavani |

ನ್ಯೂಯಾರ್ಕ್‌: ಚೀನಾದ ಸರ್ವಾಧಿಕಾರ ಆಡಳಿತ ಅಲ್ಲಿನ ವಿಶ್ವವಿಖ್ಯಾತ ಉದ್ಯಮಿ, ಆ್ಯಂಟ್‌ ಗ್ರೂಪ್‌ ಮಾಲಿಕ ಜ್ಯಾಕ್‌ ಮಾಗೆ 1 ಬಿಲಿಯನ್‌ ಡಾಲರ್‌ (8,261 ಕೋಟಿ ರೂ.) ದಂಡ ಹೇರಿದೆ. ಮೂರು ವರ್ಷಗಳಿಂದ ಆ್ಯಂಟ್‌ ಗ್ರೂಪ್‌ನ ವ್ಯವಹಾರಗಳನ್ನು ತನಿಖೆ ಮಾಡುತ್ತಿದ್ದ ಆಡಳಿತ ಅಂತಿಮವಾಗಿ 2020ರಲ್ಲಿ ಆ್ಯಂಟ್‌ ಗ್ರೂಪ್‌ 34 ಬಿಲಿಯನ್‌ ಡಾಲರ್‌ ಸಂಗ್ರಹಿಸಲು ಭಾರೀ ಪ್ರಮಾಣದ ಐಪಿಒಗಳನ್ನು ಬಿಡುಗಡೆ ಮಾಡಿತ್ತು.

Advertisement

ಆಗಲೇ ಸರ್ಕಾರ ಅದಕ್ಕೆ ತಡೆ ನೀಡಿತ್ತು. ಇದೀಗ ದಂಡ ಹೇರುವುದರೊಂದಿಗೆ 3 ವರ್ಷಗಳ ವಿಚಾರಣೆಯನ್ನು ಮುಗಿಸಿದಂತಾಗಿದೆ. ಆದರೆ ಈ ನೋವಿನ ಕಥೆ ಇಷ್ಟಕ್ಕೆ ಮುಗಿದಿಲ್ಲ. ಆ್ಯಂಟ್‌ ಗ್ರೂಪ್‌ನ ಸಹೋದರ ಸಂಸ್ಥೆ ಅಲಿಬಾಬಾ ಮೇಲೆ 2.8 ಬಿಲಿಯನ್‌ ಡಾಲರ್‌ ದಂಡ ವಿಧಿಸಲಾಗಿದೆ. ಜ್ಯಾಕ್‌ ಮಾ ದೀರ್ಘ‌ಕಾಲ ಹೊರಜಗತ್ತಿಗೆ ಕಾಣಿಸಿಕೊಂಡಿರಲಿಲ್ಲ. ಅವರನ್ನು ಚೀನಾ ಆಡಳಿತ ಕೊಂದಿದೆ ಎಂದೇ ಹೇಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next