Advertisement

ದೆಹಲಿ ಮನೆಯಲ್ಲಿ ಅಜ್ಜಿ, ಮೂವರು ಹೆಣ್ಮಕ್ಕಳು ಸೇರಿ ಐವರ ಶವ ಪತ್ತೆ

01:59 PM Oct 07, 2017 | Team Udayavani |

ನವದೆಹಲಿ: 82 ವರ್ಷದ ಅಜ್ಜಿ ಹಾಗೂ ಆಕೆಯ ಮೂವರು ಹೆಣ್ಣುಮಕ್ಕಳು ಸೇರಿದಂತೆ ಐವರ ಶವ ಮನೆಯೊಂದರಲ್ಲಿ ಪತ್ತೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಡಿಸಿಪಿ ನೂಪುರ್ ಪ್ರಸಾದ್ ಐಎಎನ್ ಎಸ್ ಜತೆ ಮಾತನಾಡುತ್ತ, ಜಿಂದಾಲ್ ಕುಟುಂಬಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಗಾರ್ಡ್ ಸೇರಿದಂತೆ ಐದು ಮಂದಿಯ ಶವ ಇಲ್ಲಿನ ಮಾನಸಸರೋವರ ಪಾರ್ಕ್ ಪ್ರದೇಶದಲ್ಲಿನ ಮನೆಯೊಂದರಲ್ಲಿ ಪತ್ತೆಯಾಗಿರುವುದಾಗಿ ವಿವರಿಸಿದ್ದಾರೆ.

ಮೃತರನ್ನು ಊರ್ಮಿಳಾ ಜಿಂದಾಲ್(82ವರ್ಷ), ಸಂಗೀತಾ(56), ನೂಪುರ್(48 ವರ್ಷ) ಹಾಗೂ ಅಂಜಲಿ (38) ಹಾಗೂ ಗಾರ್ಡ್ ರಾಕೇಶ್ (42ವರ್ಷ) ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ 7ಗಂಟೆಗೆ ಪೊಲೀಸ್ ಠಾಣೆಗೆ ಈ ಕುರಿತು ದೂರವಾಣಿ ಕರೆ ಬಂದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ.

ಮನೆಯಲ್ಲಿ ಯಾವುದೇ ವಸ್ತುಗಳ ಕಳ್ಳತನವಾಗಿಲ್ಲ. ಅಲ್ಲದೇ ಯಾರೂ ಹೊರಗಿನಿಂದ ಮನೆಯೊಳಗೆ ಹೋಗಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next