Advertisement
ಒಲಿಂಪಿಕ್ಸ್‌ಗಾಗಿ ರಾಜ್ಯದ 75 ಮಂದಿ ಕ್ರೀಡಾಳುಗಳಿಗೆ ತರಬೇತಿ ನೀಡುವ ಯೋಜನೆ ಇದ್ದು, ಖೇಲೋ ಇಂಡಿಯಾ ಕೂಟಕ್ಕೆ ಕರ್ನಾಟಕದಲ್ಲಿ ಪೂರಕ ಸಿದ್ಧತೆಗಳಾಗುತ್ತಿವೆ ಎಂದರು.
Related Articles
Advertisement
ಮಂಗಳೂರು ವಿ.ವಿ. ಉಪಕುಲಪತಿ ಡಾ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಶಾಸಕ ಕೆ. ಉಮಾನಾಥ್ ಕೋಟ್ಯಾನ್ ಕ್ರೀಡಾಜ್ಯೋತಿ ಬೆಳಗಿಸಿದರು. ತೀರ್ಥೇಶ ಶೆಟ್ಟಿ ಪ್ರಮಾಣವಚನ ಬೋಧಿ ಸಿದರು. ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್‌ನ ಜಂಟಿ ಕಾರ್ಯದರ್ಶಿ ಡಾ. ಬಲ್ಜೀತ್ ಸಿಂಗ್ ಸೋಖನ್ ಧ್ವಜಾರೋಹಣ ನೆರವೇರಿಸಿದರು.
ಇದನ್ನೂ ಓದಿ:ಠಾಕೂರ್ ಸೂಪರ್ ಬೌಲಿಂಗ್; ಭಾರತ ತಿರುಗೇಟು
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕನ್ನಡ ಹಾಗೂ ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್, ಮಾಜಿ ಕ್ರೀಡಾ ಸಚಿವರಾದ ಅಭಯಚಂದ್ರ, ಪ್ರಮೋದ್ ಮಧ್ವರಾಜ್, ವಿಶೇಷ ಆಹ್ವಾನಿತರಾಗಿ ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿಯ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಬಿನು ಜಾರ್ಜ್ ವರ್ಗೀಸ್, ಅದಾನಿ ಗ್ರೂಪ್ಸ್ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿ ರವೀಂದ್ರ ಆಳ್ವ, ಶಶಿಧರ್ ಶೆಟ್ಟಿ, ಎಂಸಿಎಸ್ ಸಂಘದ ಸಿಇಒ ಚಂದ್ರಶೇಖರ್ ಎಂ., ಕಾರ್ಡೊಲೆ„ಟ್ ಜಿ.ಎಂ. ದಿವಾಕರ್ ಕದ್ರಿ, ಕೆ. ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ5ನೇ ಬಾರಿಗೆ ಆಳ್ವಾಸ್ ಅತಿಥ್ಯದಲ್ಲಿ ಜರಗುತ್ತಿರುವ ಕ್ರೀಡಾಕೂಟದ ಉದ್ಘಾಟನೆಯ ಮುನ್ನ 248 ವಿ.ವಿ.ಗಳ ಆ್ಯತ್ಲೀಟ್‌ಗಳು ಆಕರ್ಷಕ ಪಥಸಂಚಲನ ನೆರವೇರಿಸಿದರು. ಪಥಸಂಚಲನದ ಬಳಿಕ ಅದ್ದೂರಿಯಾದ ಸಾಂಸ್ಕೃತಿಕ ಮೆರವಣಿಗೆಯಲ್ಲಿ, ರಾಷ್ಟ್ರದ ವಿವಿಧ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ 150ಕ್ಕೂ ಹೆಚ್ಚು ಕಲಾತಂಡಗಳು ಭಾಗವ ಹಿಸಿದ್ದು ಸುಡುಮದ್ದು ಪ್ರದರ್ಶನಏರ್ಪಡಿಸಲಾಗಿತ್ತು. ಮಂ.ವಿ. ವಿ. ದೈ.ಶಿ. ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ ಸ್ವಾಗತಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅತಿಥಿಗಳನ್ನು ಗೌರವಿಸಿದರು. ರಾಜೇಶ್ ಡಿ’ಸೋಜ ಮತ್ತು ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. 10 ಸಾವಿರ ಮೀ. ಓಟ: ಆಳ್ವಾಸ್‌ನ ಆದೇಶ್ ದಾಖಲೆ
ಕೂಟದ ಮೊದಲ ಸ್ಪರ್ಧೆಯಾದ 10,000 ಮೀ. ಓಟದಲ್ಲಿ ಮಂಗಳೂರು ವಿ.ವಿ.ಯ ಆದೇಶ್ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ (29 ನಿ. 15.46 ಸೆ.). ಆದೇಶ್ ಆತಿಥೇಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ. 2021ರ 80ನೇ ಅಖಿಲ ಭಾರತ ಅಂತರ್ ವಿ.ವಿ. ಆ್ಯತ್ಲೆಟಿಕ್ಸ್‌ನಲ್ಲಿ ನಿರ್ಮಾಣಗೊಂಡ ಆಳ್ವಾಸ್‌ನ ನರೇಂದ್ರ ಪ್ರತಾಪ್ ಸಿಂಗ್ (29 ನಿ. 42.19 ಸೆ.) ಅವರ ದಾಖಲೆಯನ್ನು ಆದೇಶ್ ಮುರಿದರು. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಆರಿಫ್ ಹಾಗೂ ರಾಮ್ ವಿನೋದ್ ಕೂಡ ಹಿಂದಿನ ದಾಖಲೆಯನ್ನು ಉತ್ತಮಪಡಿಸಿದರು. ಕೂಟದ ದಾಖಲೆಗಾಗಿ ಆದೇಶ್ ಅವರಿಗೆ ಆಳ್ವಾಸ್ ಪ್ರತಿಷ್ಠಾನದ ವತಿಯಿಂದ 25,000 ರೂ. ಹಾಗೂ ಚಿನ್ನದ ಪದಕ ಗೆದ್ದ ಸಾಧನೆಗೆ 25,000 ರೂ. ನೀಡಲಾಗಿದೆ.