Advertisement

Iceland ನಲ್ಲಿ 14 ಗಂಟೆಗಳ ಅಂತರದಲ್ಲಿ 800 ಭೂಕಂಪನಗಳು; ತುರ್ತು ಪರಿಸ್ಥಿತಿ ಘೋಷಣೆ

12:51 PM Nov 11, 2023 | Team Udayavani |

ರೇಕ್ಜಾವಿಕ್: ಕೆಲವೇ ಗಂಟೆಗಳ ಸಮಯದ ಅಂತರದಲ್ಲಿ ಹಲವು ಭಾರಿ ಪ್ರಮಾಣದ ಭೂಕಂಪನಗಳಿಗೆ ತುತ್ತಾದ ಐಸ್ ಲ್ಯಾಂಡ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

Advertisement

“ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರು ಗ್ರಿಂಡವಿಕ್‌ನ ಉತ್ತರದ ಸುಂಧ್‌ ಜುಕಗಿಗರ್‌ನಲ್ಲಿ ತೀವ್ರವಾದ ಭೂಕಂಪದ ಕಾರಣ ನಾಗರಿಕ ರಕ್ಷಣೆಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ” ಎಂದು ನಾಗರಿಕ ರಕ್ಷಣೆ ಮತ್ತು ತುರ್ತು ನಿರ್ವಹಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

“ಭೂಕಂಪಗಳು ಸಂಭವಿಸಿದಕ್ಕಿಂತ ದೊಡ್ಡದಾಗಬಹುದು, ಈ ಘಟನೆಗಳ ಸರಣಿಯು ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು” ಎಂದು ಆಡಳಿತವು ಎಚ್ಚರಿಸಿದೆ.

ಐಸ್ಲ್ಯಾಂಡಿಕ್ ಮೆಟ್ ಆಫೀಸ್ (IMO) ಕೆಲವೇ ದಿನಗಳಲ್ಲಿ ಜ್ವಾಲಾಮುಖಿ ಸ್ಫೋಟವು ಸಂಭವಿಸಬಹುದು ಎಂದು ಹೇಳಿದೆ.

ರಾಜಧಾನಿ ರೇಕ್ಜಾವಿಕ್‌ಗೆ ಸುಮಾರು 40 ಕಿಲೋಮೀಟರ್‌ ಗಳಷ್ಟು ದೂರದಲ್ಲಿ ಎರಡು ಪ್ರಬಲ ಭೂಕಂಪಗಳು ನಡೆದವು. ದೇಶದ ದಕ್ಷಿಣ ಕರಾವಳಿಯ ಹೆಚ್ಚಿನ ಭಾಗಗಳಲ್ಲಿ, ಕಿಟಕಿಗಳು ಮತ್ತು ಗೃಹೋಪಯೋಗಿ ವಸ್ತುಗಳು ಕಂಪಿಸಿದವು.

Advertisement

14 ಗಂಟೆಯ ಅಂತರದಲ್ಲಿ ಐಸ್ ಲ್ಯಾಂಡ್ ದೇಶದಲ್ಲಿ ಸುಮಾರು 800 ಭೂಕಂಪನಗಳು ಸಂಭವಿಸಿದೆ. ಅಕ್ಟೋಬರ್ ಅಂತ್ಯದಿಂದ ದ್ವೀಪದಲ್ಲಿ ಸುಮಾರು 24,000 ನಡುಕಗಳು ದಾಖಲಾಗಿವೆ ಎಂದು ಐಎಂಒ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next