Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರಾಭಿವೃದ್ಧಿ ಸಚಿವರ ಕುಮ್ಮಕ್ಕಿನಿಂದಾಗಿ ಅಧಿಕಾರಿಗಳು ಕದ್ದುಮುಚ್ಚಿ ವ್ಯವಹಾರ ನಡೆಸಿದ್ದಾರೆ. ಬಿಬಿಎಂಪಿ ಒಂದು ಮಾದರಿಯ ಯಂತ್ರಕ್ಕೆ ಟೆಂಡರ್ ಕರೆದರೆ, ಗುತ್ತಿಗೆ ಪಡೆದ ಸಂಸ್ಥೆ ಇನ್ನೊಂದು ಮಾದರಿಯ ಯಂತ್ರ ಒದಗಿಸಿದೆ ಎಂದು ದೂರಿದರು.
Related Articles
Advertisement
ಪ್ರತಿ ಯಂತ್ರಕ್ಕೆ 1.18 ಕೋಟಿ ರೂ. ಮತ್ತು ಐದು ವರ್ಷದ ನಿರ್ವಹಣೆಗೆ 2.26 ಕೋಟಿ ರೂ. ನಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಕುರಿತು ಆದೇಶ ಹೊರಡಿಸಲು ಕೆಲವೇ ದಿನ ಮುನ್ನ ಟಿಪಿಎಸ್ ಕಂಪೆನಿ ಸರ್ಕಾರಕ್ಕೆ ಪತ್ರ ಬರೆದು ನಿರ್ವಹಣೆ ವೆಚ್ಚವನ್ನು 2.26 ಕೋಟಿ ರೂ.ಗೆ ಹೆಚ್ಚಿಸಬೇಕು ಎಂದು ಕೋರಿತ್ತು. ಈ ಬಗ್ಗೆ ಸರ್ಕಾರದಿಂದ ಒಪ್ಪಿಗೆ ಪಡೆಯದೆ ಮತ್ತು ಪಾಲಿಕೆಯ ಅನುಮತಿ ಇಲ್ಲದೆ ನಿರ್ವಹಣೆ ಮೊತ್ತವನ್ನು 2.48 ಕೋಟಿಗೆ ಪರಿಷ್ಕರಿಸಲಾಗಿದೆ.
ಇನ್ನೊಂದೆಡೆ ಖರೀದಿ ನಂತರ ಮುಖ್ಯಮಂತ್ರಿಗಳೇ ಅದರ ಕಾರ್ಯಕ್ಕೆ ಚಾಲನೆ ನೀಡಿದರು. ಆದರೆ, ಟೆಂಡರ್ ಕರೆದಿದ್ದು ಸೆಲ#… ಪ್ರೊಫೈಲ್ಡ… ಮಷೀನ್‌ಗೆ ಟೆಂಡರ್ ಕರೆದರೆ ಕಂಪೆನಿ ಟ್ರಕ್ ಮೌಂಟೆಡ್ ವಾಹನ ನೀಡಿತ್ತು. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತಿದ್ದಂತೆ ಅಧಿಕಾರಿಗಳು ಹೊಸ ಕಡತವನ್ನೇ ಸೃಷ್ಟಿಮಾಡಿ ತಾಂತ್ರಿಕ ದೋಶದ ಕಾರಣ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೆಲ್ಫ್ ಪ್ರೊಫೈಲ್ಡ್ ಯಂತ್ರದ ಖರೀದಿಗೆ 5 ವರ್ಷದ ನಿರ್ವಹಣೆಗೆ 24.15 ಕೋಟಿಗೆ ಅನುಮೋದಿಸಲಾಗಿದ್ದು, ಟ್ರಕ್ ಮೌಂಟೆಡ್ ಯಂತ್ರ ಖರೀದಿಗೆ ಹಾಗೂ 5 ವರ್ಷದ ನಿರ್ವಹಣೆಗೆ 27.21 ಕೊಟಿ ರೂ.ಗೆ ಕಡತ ಮಂಡಿಸಿ ಅನುಮೋದನೆ ಪಡೆಯಲಾಗಿದೆ, ಅಚ್ಚರಿ ಎಂದರೆ ಕಡತ ಮಂಡಿಸುವ ಒಂದು ತಿಂಗಳ ಮೊದಲೇ (2017ರ ಜೂ.24)ರಂದು ಕಾರ್ಯಾದೇಶ ನೀಡಲಾಗಿದೆ. ಅಲ್ಲದೆ, ಒಪ್ಪಂದ ಉಲ್ಲಂಘನೆಯಾದರೆ ಮುಂದಿನ ಕ್ರಮದ ಬಗ್ಗೆಯೂ ಪ್ರಸ್ತಾಪಿಸಿಲ್ಲ ಎಂದು ದೂರಿದರು.
ಹಗರಣದಲ್ಲಿ ಜಂಟಿ ಆಯುಕ್ತ ಸಫರಾಜ್ ಖಾನ್, ಕಾರ್ಯಪಾಲಕ ಅಭಿಯಂತರರಾದ ಹೇಮಲತಾ ಹಾಗೂ ಲೋಕೇಶ್, ತಾಂತ್ರಿಕ ಸಹಾಯಕ ಸಂತೋಷ್ ಸಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಅವರು, ಸಚಿವರ ಕುಮ್ಮಕ್ಕಿನಿಂದಲೇ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಆಪಾದಿಸಿದರು.