Advertisement
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಕಾರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಸುಗಳಿಗೆ ಸಮತೋಲನ ಆಹಾರ ನೀಡಿದರೆ ಹಾಲಿನಲ್ಲಿ ಫ್ಯಾಟ್ ಅಂಶ ಹೆಚ್ಚಾಗುತ್ತದೆ ಎಂದರು.
Related Articles
Advertisement
ಒಕ್ಕೂಟದ ನಿರ್ದೇಶಕರ ಅನುದಾನದಲ್ಲಿ ಒಂದು ಮಾದರಿ ದನದ ಕೊಟ್ಟಿಗೆ ನಿರ್ಮಾಣ ಮಾಡಲಾಗುತ್ತಿದೆ. ಒಕ್ಕೂಟದ ಸಹಕಾರದಿಂದ ರಾಸುಗಳ ಆರೋಗ್ಯ ತಪಾಸಣೆ, ಲಸಿಕೆ, ವಿಮಾ ಯೋಜನೆ, ಸಂಘದ ಸದಸ್ಯರಿಗೆ ಶುದ್ಧ ಹಾಗೂ ಗುಣಮಟ್ಟದ ಹಾಲು ಉತ್ಪಾದನೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ರಾಸುಗಳ ಆರೋಗ್ಯಕ್ಕೆ ತುರ್ತು ವೈದ್ಯಕೀಯ ಸೇವೆಯನ್ನು ಸಹ ನೀಡಲಾಗುತ್ತಿದೆ. ಸಂಘದ ಸದಸ್ಯರು ಸಂಘವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಗುಣಮಟ್ಟದ ಹಾಲು ಪೂರೈಕೆಗೆ ಒತ್ತು ನೀಡಬೇಕು ಎಂದು ಹೇಳಿದರು.
ನಿರ್ದೇಶಕರಾದ ಕೆ.ಲಕ್ಷ್ಮೀಗೌಡ, ಎಂ.ಮುನಿಕೃಷ್ಣಪ್ಪ, ಬಿ.ಎನ್.ಮುನೇಗೌಡ, ಕೆ.ಎಸ್.ಮುನೇಗೌಡ, ಕೆ.ಸುನೀಲ್, ಎಂ. ವೆಂಕಟೇಶ್, ಕಾಂತಮ್ಮ, ನಾಗರತ್ನ, ನಾರಾಯಣಮ್ಮ, ನಾರಾಯಣಸ್ವಾಮಿ, ದೇವನಹಳ್ಳಿ ಶಿಬಿರದ ಬಮೂಲ್ ವಿಸ್ತರಣಾಧಿಕಾರಿ ಹೆಚ್. ಎಂ.ಅನಿಲ್‌ಕುಮಾರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಮುನಿರಾಜು, ಹಾಲು ಪರೀಕ್ಷಕ ಶಶಿಕುಮಾರ ವಿ., ಸಹಾಯಕಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಎ.ದೇವರಾಜ್, ರಾಜೇಂದ್ರ, ತಾಪಂ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ಮುಖಂಡ ಮುನಿಕೃಷ್ಣ, ಸದಸ್ಯರು ಇದ್ದರು.
ಸಂಘವು ಒಕ್ಕೂಟ ಮತ್ತು ಗ್ರಾಮದ ವಿಎಸ್‌ಎಸ್‌ಎನ್, ಕೆಜಿಬಿ ಕಾರ್ಪೊರೇಷನ್ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿ ಹೊಂದಿದ್ದು, ಸಂಘದ ಸದಸ್ಯರ, ಆಡಳಿತ ಮಂಡಳಿಯ, ಒಕ್ಕೂಟ ನಿರ್ದೇಶಕರು, ಅಧಿಕಾರಿ ಗಳ ಸಹಕಾರ ಮತ್ತು ಮಾರ್ಗ ದರ್ಶನದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. –ಎಸ್.ಭೈರೇಗೌಡ, ಅಧ್ಯಕ್ಷ ಕಾರಹಳ್ಳಿ ಡೇರಿ