Advertisement
ಘಟನೆ ವಿವರ: ಸೋಮವಾರ (ಎ.24 ರಂದು) ರಾತ್ರಿ 10:30 ರ ವೇಳೆಗೆ ಬಾಲಕಿ ಆದಿತ್ಯಶ್ರೀ ಮೊಬೈಲ್ ನಲ್ಲಿ ಸಿನಿಮಾ ನೋಡುತ್ತಿರುವಾಗ ಮೊಬೈಲ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಮುಖ,ಕೈಗೆ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಳು.
Related Articles
Advertisement
ಆರೋಪಗಳನ್ನು ಕೇಳಿರುವ ಕ್ಸಿಯೋಮಿ ಒಡೆತನದ ರೆಡ್ಮಿ ಈ ಬಗ್ಗೆ “ಕ್ಸಿಯೋಮಿ ಇಂಡಿಯಾದಲ್ಲಿ ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಕಷ್ಟದ ಸಮಯದಲ್ಲಿ ನಾವು ಬಾಲಕಿಯ ಕುಟುಂಬದೊಂದಿಗೆ ನಿಲ್ಲುತ್ತೇವೆ ಮತ್ತು ಯಾವುದೇ ರೀತಿಯ ಸಹಾಯಬೇಕಾದರೆ ನಾವು ಅದನ್ನು ಮಾಡಲು ಸಿದ್ದ. ಅವರು ಬಳಸುತ್ತಿದ್ದ ಮೊಬೈಲ್ ರೆಡ್ಮಿ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಘಟನೆಯ ನಿಜವಾದ ಕಾರಣವನ್ನು ತಿಳಿಯಲು ನಾವು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಅಗತ್ಯವಿರುವಲ್ಲಿ ಅವರರೊಂದಿಗೆ ಸಹಕಾರ ನೀಡುತ್ತೇವೆ” 91 ಮೊಬೈಲ್ ಗೆ ಸಂಸ್ಥೆ ಹೇಳಿದೆ.
ಮೊಬೈಲ್ ಸ್ಫೋಟ ಹಾಗೂ ಮೊಬೈಲ್ ಸಂಬಂಧಿರ ಅಪಘಾತಗಳು ನಡೆದಿರುವುದು ಇದೇ ಮೊದಲಲ್ಲ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಬದುವಾನ್‌ನಲ್ಲಿ ಬಾಲಕನೊಬ್ಬ ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದ. ಫೋನ್ ಚಾರ್ಜ್ ಇಟ್ಟೇ ಮಾತನಾಡುತ್ತಿದ್ದ 68 ವರ್ಷದ ವ್ಯಕ್ತಿಯೊಬ್ಬ ಮೊಬೈಲ್ ಸ್ಫೋಟಗೊಂಡು ಮೃತಪಟ್ಟಿದ್ದರು.