Advertisement

5 ಅಪ್ರಾಪ್ತ ವಯಸ್ಕ ಬಾಲಕರಿಂದ 8 ರ ಬಾಲಕಿಯ ಗ್ಯಾಂಗ್‌ರೇಪ್‌

03:16 PM Dec 22, 2017 | Team Udayavani |

ಪುಣೆ: ನಗರದಲ್ಲಿ ನಡೆದ ಬೆಚ್ಚಿ ಬೀಳಿಸುವ ಹೇಯ ಘಟನೆಯೊಂದರಲ್ಲಿ ಐವರು ಅಪ್ರಾಪ್ತ ವಯಸ್ಕ ಬಾಲಕರು ಮತ್ತು 19 ವರ್ಷದ ತರುಣನೊಬ್ಬ ಸೇರಿ  8 ವರ್ಷ ಪ್ರಾಯದ ಬಾಲಕಿಯ ಗ್ಯಾಂಗ್‌ರೇಪ್‌ ನಡೆಸಿದ್ದಾರೆ. 

Advertisement

ಬಾಲಕಿಗೆ ಚಾಕ್‌ಲೇಟ್‌ ನ ಆಮಿಷ ನೀಡಿ  ಕರೆದೊಯ್ದು ಐವರು ಕೃತ್ಯ ಎಸಗಿದ್ದಾರೆ. ಬಾಲಕಿ ತೀವ್ರ ಅಸ್ವಸ್ಥಗೊಂಡು ಗುಪ್ತಾಂಗದ ಭಾಗದಲ್ಲಿ ತೀವ್ರ ನೋವಾಗುತ್ತಿದೆ ಎಂದು ಹೇಳಿಕೊಂಡಾಗ ಆಸ್ಪತ್ರೆಗೆ ಕರೆದೊಯ್ದಾಗ ಅತ್ಯಾಚಾರ ನಡೆದಿರುವುದು ಧೃಡಪಟ್ಟಿದೆ. 

ಕೃತ್ಯ ಎಸಗಿದ ಆರೋಪಿಗಳು 13 ರಿಂದ 18 ವರ್ಷ ಒಳಗಿನವರು ಎಂದು ಪೊಲೀಸರು ತಿಳಿಸಿದ್ದು, ಈ ಪೈಕಿ ಓರ್ವನನ್ನು ವಶಕ್ಕೆ ಪಡೆಯಲಾಗಿದ್ದು ಉಳಿದ  ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next