Advertisement

ಪ್ರವಾಸಿಗರೆದುರೇ 78 ತಿಮಿಂಗಿಲಗಳ ಬಲಿ

08:54 PM Jul 16, 2023 | Team Udayavani |

ತೋರ್ಶ್‌ವನ್‌: ಡೆನ್ಮಾರ್ಕ್‌ನ ಫೆರೋ ದ್ವೀಪದಲ್ಲಿ ಪ್ರಯಾಣಿಸುತ್ತಿದ್ದ ವಿಲಾಸಿ ನೌಕೆಯ ಪ್ರಯಾಣಿಕರ ಎದುರೇ ಡಾಲ್ಫಿನ್‌ ಜಾತಿಯ 78 ತಿಮಿಂಗಿಲಗಳನ್ನು ಕೊಂದಿರುವ ಘಟನೆ ವರದಿಯಾಗಿದ್ದು, ಘಟನೆ ಬಗ್ಗೆ ಬ್ರಿಟಿಷ್‌ ವಿಲಾಸಿ ನೌಕೆಯ ನಿರ್ವಹಣಾ ಸಂಸ್ಥೆ ಅಂಬಾಸಿಡರ್‌ಕ್ರೂಸ್‌ ಲೈನ್‌ ಕ್ಷಮೆಯಾಚಿಸಿದೆ.

Advertisement

ಫೆರೋ ದ್ವೀಪದ ರಾಜಧಾನಿ ತೋರ್ಶ್‌ವನ್‌ನಲ್ಲಿ ವಿಲಾಸಿ ನೌಕೆ ಪ್ರಯಾಣಿಸುವ ಸಂದರ್ಭದಲ್ಲೇ ಸ್ಥಳೀಯ ಗುಂಪೊಂದು ಸಾಮೂಹಿಕವಾಗಿ ತಿಮಿಂಗಿಲಗಳನ್ನು ಹತ್ಯೆ ಮಾಡಿದೆ. ಇದರಿಂದ ಪ್ರವಾಸಿಗರು ಗಲಿಬಿಲಿಗೊಂಡಿದ್ದಾರೆ. ಆದರೆ, ಇದು ಫೆರೋ ದ್ವೀಪದಲ್ಲಿನ ಪ್ರಾಚೀನ ಬೇಟೆ ಸಂಪ್ರದಾಯವೆಂದು ಸ್ಥಳೀಯ ಸಮುದಾಯ ತಿಳಿಸಿದೆ. ಆದರೆ, ವಿಲಾಸಿ ನೌಕೆಯ ಪಯಣದ ವೇಳೆ ಘಟನೆ ನಡೆದ ಕಾರಣ ಸಂಸ್ಥೆ ಕ್ಷಮೆ ಯಾಚಿಸಿದೆ. ಇಂಥ ಸಂಪ್ರದಾಯಗಳನ್ನು ನಾವೂ ವಿರೋಧಿಸುತ್ತೇವೆ, ತಿಮಿಂಗಿಲಗಳ ಸುರಕ್ಷತೆ ಬಗ್ಗೆ ಸಂಬಂಧಪಟ್ಟ ಆಡಳಿತದ ಜತೆಗೆ ಮಾತುಕತೆ ನಡೆಸುತ್ತೇವೆ ಎಂದೂ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next