Advertisement

ಟೀಮ್‌ ಇಂಡಿಯಾಕ್ಕೆ ವರ್ಷವಿಡೀ ಕ್ರಿಕೆಟ್‌!

05:44 PM Nov 09, 2021 | Team Udayavani |

ಹೊಸದಿಲ್ಲಿ: ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನಾಕೌಟ್‌ ಪ್ರವೇಶಿಸುವ ಮುನ್ನವೇ ನಿರ್ಗಮಿಸಿದ ಟೀಮ್‌ ಇಂಡಿಯಾಕ್ಕೆ ಮುಂದಿನ ಎಂಟು ತಿಂಗಳ ಕಾಲ ಬಿಡುವಿಲ್ಲದಷ್ಟು ಸರಣಿಗಳು ಕಾದಿವೆ.

Advertisement

ನವಂಬರ್‌ನಿಂದ 2022ರ ಜುಲೈ ತನಕ ಬರೋಬ್ಬರಿ 8 ಟೆಸ್ಟ್‌, 9 ಏಕದಿನ ಹಾಗೂ 21 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಜತೆಗೆ 74 ಪಂದ್ಯಗಳ ಮಹಾ ಐಪಿಎಲ್‌!

ಈ ಅವಧಿಯಲ್ಲಿ ಒಟ್ಟು 6 ಸರಣಿಗಳನ್ನು ಭಾರತ ಆಡಲಿದೆ. ಇದರಲ್ಲಿ 4 ತವರಿನ ಸರಣಿಗಳಾದರೆ, 2 ವಿದೇಶಿ ಸರಣಿಗಳಾಗಿವೆ.

ನ್ಯೂಜಿಲ್ಯಾಂಡ್‌, ವೆಸ್ಟ್‌ ಇಂಡೀಸ್‌, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳನ್ನು ತವರಲ್ಲಿ ಆಡಲಾಗುವುದು. ಎರಡು ವಿದೇಶಿ ಸರಣಿಗಳಾಗಿವೆ. ಭಾರತ ಯುಎಇಯಿಂದ ವಾಪಸಾಗುವಷ್ಟರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಸರಣಿ ಮೊದಲ್ಗೊಳ್ಳಲಿದೆ. ನ. 17ರಿಂದ ಡಿ.7ರ ತನಕ ನಡೆಯುವ ಈ ಸರಣಿಯಲ್ಲಿ 3 ಟಿ20, 2 ಟೆಸ್ಟ್‌ ಪಂದ್ಯಗಳನ್ನು ಆಡಲಾಗುವುದು.

ಇದನ್ನೂ ಓದಿ:ಭೂಗತಜಗತ್ತಿನ ಜತೆ ಫಡ್ನಾವೀಸ್ ಗೆ ಇರುವ ನಂಟನ್ನು ಬಹಿರಂಗಗೊಳಿಸುವೆ: ಮಲಿಕ್

Advertisement

ವರ್ಷಾಂತ್ಯ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಇದೊಂದು ಪೂರ್ಣ ಪ್ರಮಾಣದ ಸರಣಿಯಾಗಿದ್ದು, 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಲಾಗುವುದು. ಜ. 26ರ ತನಕ ಈ ಸರಣಿ ಸಾಗಲಿದೆ.

ಫೆಬ್ರವರಿಯಲ್ಲಿ ವೆಸ್ಟ್‌ ಇಂಡೀಸ್‌ ತಂಡ ಭಾರತಕ್ಕೆ ಆಗಮಿಸಿ 3 ಏಕದಿನ, 3 ಟಿ20 ಪಂದ್ಯಗಳ ಸರಣಿ ಆಡಲಿದೆ. ಬಳಿಕ ಶ್ರೀಲಂಕಾ ಆಗಮನದ ಸರದಿ. ಇದು 2 ಟೆಸ್ಟ್‌ ಹಾಗೂ 3 ಏಕದಿನ ಪಂದ್ಯಗಳ ಸರಣಿ.

ಮುಂದಿನದ್ದು ಐಪಿಎಲ್‌. ಇದು ಮುಗಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡ ಆಗಮಿಸಿ 5 ಟಿ20 ಪಂದ್ಯಗಳನ್ನು ಆಡಲಿದೆ (ಜೂ. 9-19). ಜುಲೈ ಆರಂಭದಲ್ಲಿ ಭಾರತ ತಂಡ ಇಂಗ್ಲೆಂಡಿಗೆ ತೆರಳಿ ಬಾಕಿ ಉಳಿದ ಒಂದು ಟೆಸ್ಟ್‌, 3 ಟಿ20 ಹಾಗೂ 3 ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next