ದುಬೈ: ಈ ಬಾರಿಯ ಟಿ20 ವಿಶ್ವಕಪ್ ನಡೆಯುತ್ತಿರುವಂತೆ ಮುಂದಿನ ಟಿ20 ವಿಶ್ವಕಪ್ ನ ರೂಪುರೇಷೆಗಳು ಸಿದ್ದವಾಗುತ್ತಿದೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಎಂಟು ತಂಡಗಳು ನೇರ ಅರ್ಹತೆ ಪಡೆದಿದೆ.
ರ್ಯಾಂಕಿಂಗ್ ನಲ್ಲಿ ಅಗ್ರ ಎಂಟು ಸ್ಥಾನದಲ್ಲಿರುವ ತಂಡಗಳು ವಿಶ್ವಕಪ್ ಗೆ ನೇರ ಅರ್ಹತೆ ಪಡೆಯುತ್ತದೆ. ಹೀಗಾಗಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ಥಾನ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶ ತಂಡಗಳು ನೇರ ಅರ್ಹತೆ ಪಡೆದಿದೆ.
ಈ ಬಾರಿ ಅರ್ಹತಾ ಸುತ್ತು ಆಡಿ ಸೂಪರ್ 12ಗೆ ಬಂದಿದ್ದ ಬಾಂಗ್ಲಾದೇಶ ತಂಡ ಕೊನೆಯ ತಂಡವಾಗಿ ಸ್ಥಾನ ಪಡೆದಿದೆ. ಆಸೀಸ್ ವಿರುದ್ಧ ತವರಿನಲ್ಲಿ ಸರಣಿ ಗೆದ್ದುಕೊಂಡಿದ್ದ ಬಾಂಗ್ಲಾ ರ್ಯಾಂಕಿಂಗ್ ನಲ್ಲಿ ಉನ್ನತಿ ಕಂಡಿತ್ತು. ಆದರೆ 9 ಮತ್ತು 10ನೇ ಸ್ಥಾನದಲ್ಲಿರುವ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಿ ಸೂಪರ್ 12ಗೆ ಅರ್ಹತೆ ಪಡೆಯಬೇಕಿದೆ
.
ಇದನ್ನೂ ಓದಿ:ಪಾಕ್ ಗೆಲುವನ್ನು ಸಂಭ್ರಮಿಸಿದ ಪತ್ನಿ ಮತ್ತು ಅತ್ತೆಯ ವಿರುದ್ಧ ದೂರು ನೀಡಿದ ವ್ಯಕ್ತಿ!
ಅರ್ಹತಾ ಸುತ್ತಿಗೆ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಜೊತೆಗೆ ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳು ಪ್ರವೇಶ ಪಡೆದಿದೆ. ಉಳಿದ ತಂಡಗಳು ಇನ್ನಷ್ಟೇ ನಿರ್ಧಾರವಾಗಲಿದೆ.